HEALTH TIPS

ಕೇರಳದಿಂದ ಬಂದವರ ಬಳಿ ನಕಲಿ ಕೋವಿಡ್ ಸರ್ಟಿಫಿಕೇಟ್ ಪತ್ತೆ!

                ಮಡಿಕೇರಿ: ಕೊರೊನಾದ 2ನೇ ಅಲೆ ಅಪ್ಪಳಿಸುವ ಭೀತಿಯಿಂದ ಕೊಡಗು ಜಿಲ್ಲೆ ಪ್ರವೇಶಿಸುವ ಕೇರಳ ರಾಜ್ಯದವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಕೊಡಗು-ಕೇರಳ ಗಡಿಯಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.

           ಕೇರಳ ರಾಜ್ಯದ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆಗೆ 2000 ರೂಪಾಯಿಗಳ ತನಕ ದರ ವಿಧಿಸಲಾಗುತ್ತದೆ. ಅಲ್ಲದೇ ವರದಿ ಬರುವ ತನಕ ಕಾಯಬೇಕಿದೆ. ಈ ನೆಗೆಟಿವ್‌ ವರದಿಯು ಗಡಿ ಪ್ರವೇಶಿಸುವ 72 ಗಂಟೆಗಳ ಒಳಗೆ ಮಾಡಿಸಿರಬೇಕು.

            ಆದರೆ ಜನರು ಇದಕ್ಕೊಂದು ಸುಲಭ ಉಪಾಯ ಕಂಡು ಹಿಡಿದಿದ್ದಾರೆ. ಕೇರಳದಿಂದ ಕರ್ನಾಟಕಕ್ಕೆ ಬರುವ ಜನರು ನಕಲಿ ಕೋವಿಡ್ ನೆಗೆಟಿವ್‌ ಸರ್ಟಿಫಿಕೇಟ್‌ಗಳನ್ನು ಹಾಜರುಪಡಿಸಿ ಗಡಿಯನ್ನು ದಾಟಿ ಬರುತ್ತಿದ್ದಾರೆ.

ಆರೋಗ್ಯ ಕಾರ್ಯಕರ್ತರು ನಕಲಿ ಪ್ರಮಾಣ ಪತ್ರ ತೋರಿಸುವವರನ್ನು ಪತ್ತೆ ಹಚ್ಚಿ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.


             ದಕ್ಷಿಣ ಕೊಡಗಿನ ಕುಟ್ಟ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ಕಾರ್ಯಕರ್ತರನ್ನು ಯಾಮಾರಿಸಲು ಕೆಲವರು ಮುಂದಾಗಿದ್ದಾರೆ. ಈ ರೀತಿ ಮಾಡಲು ಹೊರಟಿರುವವರಲ್ಲಿ ಬರೀ ಜನಸಾಮಾನ್ಯರು ಇಲ್ಲ, ಕೆಲವು ಆರೋಗ್ಯ ಇಲಾಖೆ ನೌಕರರು, ಖಾಸಗಿ ವೈದ್ಯರು ಹಾಗೂ ಪೊಲೀಸ್ ಅಧಿಕಾರಿಗಳ ಕುಟುಂಬ ಸದಸ್ಯರೂ ಸೇರಿರುವದು ಆಘಾತ ಮೂಡಿಸಿದೆ. ನಕಲಿ ವರದಿ ಕೊಟ್ಟವರನ್ನು ಪುನಃ ಕೇರಳಕ್ಕೆ ವಾಪಸ್ ಕಳುಹಿಸಲಾಗಿದೆ.

           ಕೇರಳದಿಂದ ಬರುವವರು ಸಲ್ಲಿಸುವ ವರದಿಯನ್ನು ಸೂಕ್ಷ್ಮವಾಗಿ ಗಮನಿಸುವ ಆರೋಗ್ಯ ಕಾರ್ಯಕರ್ತರು ವರದಿಯಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್‌ ಮಾಡಿ ಇಲಾಖೆ ನೀಡಿರುವ ಆಯಪ್ ಮೂಲಕ ರಿಪೋರ್ಟ್ ಅಸಲಿಯೋ?, ನಕಲಿಯೋ? ಎಂದು ಪತ್ತೆ ಹಚ್ಚುತ್ತಾರೆ.

        ಇದರೊಂದಿಗೆ ಸೂಚಿಸಿರುವ ಮೊಹರು, ನೀಡುವ ಐಡಿಯನ್ನು ನೋಡಲಾಗುತ್ತದೆ. ಈ ನಡುವೆಯೂ ಕೇರಳದ ಖಾಸಗಿ ವೈದ್ಯ, ಆರೋಗ್ಯ ನಿರೀಕ್ಷಕರು ಹಾಗೂ ಪೊಲೀಸ್ ಇಲಾಖೆಯ ಕುಟುಂಬದವರು ನಕಲಿ ವರದಿಯನ್ನು ತೋರಿಸಿದ್ದಾರೆ. ಆರೋಗ್ಯ ಕಾರ್ಯಕರ್ತರು ವರದಿಯನ್ನು ಗಮನಿಸಿ ಇದು ನಕಲಿ ಎಂದು ದೃಢಪಡಿಸಿದ್ದಾರೆ.

       ಕೇರಳ-ಕೊಡಗು ಗಡಿ ಪ್ರದೇಶಗಳಲ್ಲಿ ನಕಲಿ ಕೋವಿಡ್ ನೆಗೆಟಿವ್ ದೃಢೀಕರಣ ಪತ್ರಗಳನ್ನು ನೀಡುತ್ತಿರುವ ಪ್ರಕರಣಗಳ ಕುರಿತು ಮಾತನಾಡಿದ ಜಿಲ್ಲಾ ಎಸ್ಪಿ ಕ್ಷಮಾ ಮಿಶ್ರಾ, "ಈಗಾಗಲೇ ಇಂತಹ ಹಲವು ನಕಲಿ ದಾಖಲೆಗಳನ್ನು ನೀಡಿದ ವ್ಯಕ್ತಿಗಳನ್ನು ವಾಪಾಸ್ ಕಳುಹಿಸಲಾಗಿದೆ" ಎಂದು ಹೇಳಿದರು.

ನಕಲಿ ಪ್ರಮಾಣ ಪತ್ರ ನೀಡುವವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಇನ್ನು ಮುಂದೆ ಇಂತಹ ಪ್ರಕರಣ ಕಂಡು ಬಂದರೆ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries