ನವದೆಹಲಿ: ಕೇರಳದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ರಾಜ್ಯದ ಪ್ರಯತ್ನವನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ. ವಾರಗಳ ಹಿಂದೆ ವೈರಸ್ ವ್ಯಾಪಕತೆಯ ಹಂತದಲ್ಲಿದ್ದ ಕೇರಳದಲ್ಲಿ ಇದೀಗ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದೆ. ಒಂದು ತಿಂಗಳಲ್ಲಿನ ಬದಲಾವಣೆ ಶ್ಲಾಘನೀಯ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ಕೇಂದ್ರ ಕಳವಳ ವ್ಯಕ್ತಪಡಿಸಿದೆ.
ಮಹಾರಾಷ್ಟ್ರದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಸಂಖ್ಯೆ ಅಲ್ಪಾವಧಿಯಲ್ಲಿಯೇ ದ್ವಿಗುಣಗೊಂಡಿದೆ. ಆದರೆ ಕೇರಳದಲ್ಲಿ ಅದು ಅರ್ಧದಷ್ಟು ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 2133 ಜನರಿಗೆ ಸೋಂಕು ಪತ್ತೆಯಾಗಿದೆ. ಕೇರಳದ ಈ ರಕ್ಷಣಾತ್ಮಕ ಕ್ರಮ ಶ್ಲಾಘನೀಯ. ಯಾವುದೇ ರಾಜ್ಯದಲ್ಲಿ ಕೊರೋನಾ ಲಸಿಕೆಯ ಕೊರತೆ ಇಲ್ಲ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಧ್ಯಮಗಳಿಗೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಲು ಜನರು ನಿಯಮಗಳನ್ನು ಉಲ್ಲಂಘಿಸಿ ಒಟ್ಟುಗೂಡಿರುವುದು ಕಾರಣ ಎಂದು ಅವರು ಬೊಟ್ಟುಮಾಡಿದರು. ವೈರಸ್ ಹರಡಲು ಅನುವುಮಾಡಿಕೊಡಬಾರದು. ಕೊರೋನಾ ಸೋಂಕನ್ನು ನೀಗಿಸಲು ಮಾನದಂಡಗಳನ್ನು ಪೂರೈಸಬೇಕು. ಕೊರೋನಾ ಪೆÇ್ರೀಟೋಕಾಲ್ ಅನುಸರಿಸಲು ಮಹಾರಾಷ್ಟ್ರ ವಿಫಲವಾಗಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಆರೋಪಿಸಿದರು.





