ತಿರುವನಂತಪುರ: ಎನ್‍ಡಿಎ ಉಮೇದುವಾರಿಕೆಯಿಂದ ಹಿಂದೆ ಸರಿದ ಮಣಿಕುಟ್ಟನ್ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ತೀವ್ರವಾಗಿ ಟೀಕಿಸಿದ್ದಾರೆ. ಮಣಿಕುಟ್ಟನ್ ಅವರ ಉಮೇದುವಾರಿಕೆಯ ಬಗ್ಗೆ ವಿಸ್ಕøತವಾಗಿ ಅವರೊಂದಿಗೆ ಚರ್ಚೆ ನಡೆಸಲಾಗಿತ್ತು ಎಂದು ಕೆ ಸುರೇಂದ್ರನ್ ಹೇಳಿದರು. ಸ್ಪರ್ಧೆಯಿಂದ ಹಿಂದೆ ಸರಿಯಲು ಬಾಹ್ಯ ಒತ್ತಡವೇ ಕಾರಣ ಎಂದು ಶಂಕಿಸಲಾಗುತ್ತಿದೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.
ಮಾನಂದವಾಡಿ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಮಣಿಕುಟ್ಟನ್ ಆಯ್ಕೆಯಾಗಿದ್ದರು. ಈ ಬಗ್ಗೆ ಟಿವಿ ಮಾಧ್ಯಮದ ಮೂಲಕ ತಿಳಿದುಕೊಂಡ ಅವರು ಬಿಜೆಪಿ ನೀಡುವ ಅವಕಾಶವನ್ನು ಸಂತೋಷದಿಂದ ನಿರಾಕರಿಸಿರುವೆ ಎಂದು ಉಮೇದುವಾರಿಕೆಯಿಂದ ಸೋಮವಾರ ಹಿಂದೆ ಸರಿದಿದ್ದರು. ಮಣಿಕುಟ್ಟನ್ ಅವರು ಬಿಜೆಪಿ ಬೆಂಬಲಿಗರಲ್ಲ. ಮಣಿಕುಟ್ಟನ್ ತಮ್ಮ ಫೇಸ್‍ಬುಕ್ ಪುಟದಲ್ಲಿ ಅಂಬೇಡ್ಕರ್ ಪದ್ಯಪೊಂದನ್ನು ಪೋಸ್ಟ್ ಮಾಡಿದ್ದಾರೆ. ಮಣಿಕಂದನ್ ಪ್ರಸ್ತುತ ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೊನ್ನಿ ಮತ್ತು ಮಂಜೇಶ್ವರದಲ್ಲಿ ವಿಧಾನಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ.ಸುರೇಂದ್ರನ್, ಎರಡು ಕ್ಷೇತ್ರಗಳ ಮಧ್ಯದಲ್ಲಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ಪ್ರಚಾರಕ್ಕಾಗಿ ಪಕ್ಷವು ಹೆಲಿಕಾಪ್ಟರ್ ನ್ನು ನಿಯೋಜಿಸಿದೆ ಮತ್ತು ನಿರಂತರ ಎಲ್ಲೆಡೆ ಓಡಾಟಕ್ಕೆ ಅಗತ್ಯ ಎಂದು ಸುರೇಂದ್ರನ್ ಹೇಳಿರುವರು.






