ಕಾಸರಗೋಡು: ಜಿಲ್ಲಾ ಮೆಡಿಕಲ್ ಕಚೇರಿ, ರಾಷ್ಟ್ರೀಯ ಆರೋಗ್ಯ ದೌತ್ಯ, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಜಂಟಿ ವತಿಯಿಂದ ವಿಶ್ವ ಕಿವುಡುತನ ನಿವಾರಣೆ ದಿನಾಚರಣೆಯ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಜರುಗಿತು. ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಕೆ.ವಿ. ಉದ್ಘಾಟಿಸಿದರು. ಸಹಾಯಕ ವರಿಷ್ಠಾಧಿಕಾರಿ ಡಾ.ಚಂದ್ರಮೋಹನ್ ಇ. ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕಿವುಡುತನ ನಿವಾರಣೆ ಕಾರ್ಯಕ್ರಮದ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ನಿತ್ಯಾನಂದ ಬಾಬು ಸಿ.ಕೆ. ಮಾಹಿತಿ ನೀಡಿದರು. ಜಿಲ್ಲಾ ಆಸ್ಪತ್ರೆಯ ಆರ್.ಎಂ.ಒ. ಡಾ.ಶ್ರೀಜಿತ್ ಮೋಹನ್, ಜಿಲ್ಲಾ ಎಜ್ಯುಕೇಷನ್ ಆಂಡ್ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ನಸಿರ್ಂಗ್ ವರಿಷ್ಠಾಧಿಕಾರಿ ಅನ್ನಮ್ಮ ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಅಂಗವಾಗಿ "ಒಚ್ಚ" ಎಂಬ ಹೆಸರಿನ ಕಿರುಚಿತ್ರ ಬಿಡುಗಡೆಗೊಳಿಸಲಾಯಿತು.




