HEALTH TIPS

ಕೊರೋನಾ ಪ್ರಸರಣ; ಕರ್ತವ್ಯ ಸಮಯವನ್ನು 10 ರಿಂದ 2 ಕ್ಕೆ ಹೊಂದಿಸಬೇಕು: ಮುಖ್ಯಮಂತ್ರಿಗೆ ಬ್ಯಾಂಕ್ ಸಂಘಗಳ ಪತ್ರ

    

                 ತಿರುವನಂತಪುರ: ಕೊರೋನಾ ವ್ಯಾಪಕತೆಯ ಹಿನ್ನೆಲೆಯಲ್ಲಿ, ಬ್ಯಾಂಕುಗಳ ಕೆಲಸದ ಸಮಯವನ್ನು ಪುನರ್ ನವೀಕರಿಸುವ  ಅವಶ್ಯಕತೆಯಿದೆ. ಈ ಬಗ್ಗೆ ಬ್ಯಾಂಕರ್ಸ್  ಒಕ್ಕೂಟಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರವನ್ನು ಸಲ್ಲಿಸಿವೆ. ಕೆಲಸದ ಸಮಯವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಕ್ಕೆ ಸೀಮಿತಗೊಳಿಸಬೇಕು ಎಂದು ಮನವಿ ನೀಡಲಾಗಿದೆ.

               ಕೆಲಸದ ದಿನಗಳನ್ನು ವಾರದಲ್ಲಿ  ಐದಕ್ಕೆ ಇಳಿಸಬೇಕು ಎಂದು ಅದು ಒತ್ತಾಯಿಸಿದೆ. ನೌಕರರ ಸಂಖ್ಯೆಯನ್ನು ಶೇಕಡ 50 ಕ್ಕೆ ಇಳಿಸಿ, ಮನೆಯಿಂದಲೇ ಕೆಲಸಗಳನ್ನು ಜಾರಿಗೆ ತರಲು, ಹಬ್ ಬ್ಯಾಂಕಿಂಗ್ ಸೇವೆಗಳನ್ನು ಜಾರಿಗೆ ತರಲು, ಎಲ್ಲಾ ಕ್ಷೇತ್ರಗಳಲ್ಲಿ ಕೆಲಸದ ಸಮಯವನ್ನು ಕಡಿಮೆ ಮಾಡಲು, ಬ್ಯಾಂಕ್ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಆದ್ಯತೆಯ ಲಸಿಕೆ ನೀಡುವಂತೆ ಸಮಿತಿ ಸಿಎಂ ಮತ್ತು ರಾಜ್ಯ ಸರ್ಕಾರಕ್ಕೆ ಕರೆ ಮನವಿ ಮಾಡಿದೆ.  ಮತ್ತು ಇತರ ಕಾಯಿಲೆಗಳಿರುವವರು, ಗರ್ಭಿಣಿಯರು ಮತ್ತು ದೈಹಿಕವಾಗಿ ವಿಕಲಚೇತನರಿಗೆ ಇದು ಪರಿಹಾರವಾಗಲಿದೆ ಎಂದು ಮನವಿ ಬೊಟ್ಟುಮಾಡಿದೆ. 

               ರಾಜ್ಯದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭ ಗಮನದಲ್ಲಿರಿಸಿ ಈ ಬೇಡಿಕೆ ನೀಡಲಾಗಿದೆ.  ಮೊದಲ ಲಾಕ್ ಡೌನ್ ಸಮಯದಲ್ಲಿ ಮತ್ತು ನಂತರದ ನಿರ್ಬಂಧಗಳ ಸಮಯದಲ್ಲಿ ಬ್ಯಾಂಕುಗಳು ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಏಕಕಾಲಕ್ಕೆ ಐವರಿಗೆ ಮಾತ್ರ ಬ್ಯಾಂಕಿನೊಳಗೆ ಪ್ರವೇಶಿಸುವ ಅವಕಾಶ ನೀಡಲಾಗಿತ್ತು.

                  ವಿವಿಧ ಕ್ಷೇತ್ರಗಳಲ್ಲಿ ರಾಜ್ಯವು ನಿಯಂತ್ರಣಗಳನ್ನು ಬಿಗಿಗೊಳಿಸಬೇಕೆಂದು ಬ್ಯಾಂಕ್ ಒಕ್ಕೂಟಗಳು ಒತ್ತಾಯಿಸಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries