HEALTH TIPS

ಭಾರತದಲ್ಲಿ ಹೆಚ್ಚುತ್ತಲೇ ಇದೆ ಕೊರೋನಾ ಸೋಂಕಿತರ ಸಂಖ್ಯೆ: ಒಂದೇ ದಿನ 2.73 ಲಕ್ಷ ಜನರಿಗೆ ಸೋಂಕು, 1,619 ಮಂದಿ ಸಾವು

      ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಕೊರೋನಾ ಸೋಂಕಿತರ ಸಂಖ್ಯೆ ಉತ್ತುಂಗಕ್ಕೆ ತಲುಪಿದ್ದು, ನಿನ್ನೆ ಒಂದೇ ದಿನ 2 ಲಕ್ಷದ 73 ಸಾವಿರದ 810 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1 ಕೋಟಿಯ 50 ಲಕ್ಷದ 61 ಸಾವಿರದ 919ಕ್ಕೆ ಏರಿದೆ. 1,619 ಮಂದಿ ನಿನ್ನೆ ಒಂದೇ ದಿನ ಸೋಂಕಿಗೆ ಬಲಿಯಾಗಿದ್ದು, ದೇಶದಲ್ಲಿ ಈವರೆಗೆ ಸೋಂಕಿಗೆ ಒಟ್ಟಾರೆಯಾಗಿ 1 ಲಕ್ಷದ 78 ಸಾವಿರದ 769 ಮಂದಿ ಬಲಿಯಾಗಿದ್ದಾರೆ.

     ಕಳೆದ 24 ಗಂಟೆಗಳಲ್ಲಿ ಸೋಂಕು ಗುಣಮುಖವಾಗಿ ಬಿಡುಗಡೆಯಾದವರ ಸಂಖ್ಯೆ 1 ಲಕ್ಷದ 44 ಸಾವಿರದ 178 ಆಗುವ ಮೂಲಕ ಈವರೆಗೆ 1 ಕೋಟಿಯ 29 ಲಕ್ಷದ 53 ಸಾವಿರದ 821 ಮಂದಿ ಗುಣಮುಖರಾಗಿದ್ದಾರೆ. 

      ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಭಾರತದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 19 ಲಕ್ಷ ಗಡಿ ದಾಟಿದೆ. ಕಳೆದ 40 ದಿನಗಳಿಂದ ಸಕ್ರಿಯ ಕೇಸುಗಳು ಏರುಗತಿಯಲ್ಲಿಯೇ ಸಾಗುತ್ತಿದ್ದು, 19 ಲಕ್ಷದ 29 ಸಾವಿರದ 329 ಕೇಸುಗಳಿವೆ.

      ದೇಶದಲ್ಲಿ ಒಟ್ಟು 12 ಲಕ್ಷದ 38 ಸಾವಿರದ 52 ಸಾವಿರದ 566 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಕೊರೋನಾ ಪರೀಕ್ಷೆ: ನಿನ್ನೆಯ ಹೊತ್ತಿಗೆ ದೇಶದಲ್ಲಿ 26 ಕೋಟಿಯ 78 ಲಕ್ಷದ 94 ಸಾವಿರದ 549 ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ನಿನ್ನೆ ಒಂದೇ ದಿನ 13 ಲಕ್ಷದ 56 ಸಾವಿರದ 133 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries