ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಖು ಹೆಚ್ಚಳ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದಲ್ಲಿ 41 ಸಿ.ಎಫ್.ಎಲ್.ಟಿ.ಸಿಗಳ ಸಜ್ಜೀಕರಣ ನಡೆಸಲಾಗುವುದು. ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುವುದು ಎಂದು ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರುಗಳ ಸಭೆ ತಿಳಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
41 ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ 25 ಹಾಸುಗೆಗಳಿರುವ ಸಿ.ಎಫ್.ಎಲ್.ಟಿ.ಸಿ.ಗಳು 2 ದಿನಗಳ ಅವಧಿಯಲ್ಲಿ ಚಟುವಟಿಕೆ ಆರಮಭಿಸಲಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಸುಳಭವಾಗಿ ಬಂದು ತಲಪಬಹುದಾದ ರೀತಿ ಶಾಲೆ, ಕಾಲೇಜು, ಬೃಹತ್ ಕಟ್ಟಡಗಳು ಇತ್ಯಾದಿ ಕಡೆ ಈ ಕೇಂದ್ರಗಳನ್ನು ಆರಂಭಿಸಲಾಗುವುದು. ಇವುಗಳ ಪೂರ್ಣ ಹೊಣೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡಲಾಗಿದೆ. ವೀಕೇಂದ್ರಿತ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರಗಳ ಆರಂಭ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಂಚಾಯತ್ ರಾಜ್ ಕಾಯಿದೆ ಮತ್ತು ಅಂಟು ರೋಗ ನಿಯಂತ್ರಣ ಕಾಯಿದೆಗಳಡಿ ಸ್ಥಳೀಯಾಡಳಿತ ಸಮಸ್ಥೆಗಳು ಪ್ರತಿರೋಧ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಸ್ಥಳೀಯ ಮಟ್ಟದಲ್ಲಿ ಅಗತ್ಯವಿರುವ ಕಟ್ಟುನಿಟ್ಟುಗಳನ್ನು ಚುರುಕುಗೊಳಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳ ಸಭೆಗಳನ್ನು ತುರ್ತಾಗಿ ನಡೆಸಬೇಕು. ಸ್ಥಳೀಯ ಮಟ್ಟದಲ್ಲಿ ಜನಜಾಗೃತಿ ಚಟುವಟಿಕೆಗಳನ್ನು ಬಿಗಿಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯ ಮಾಸ್ಟರ್ ಯೋಜನೆಯಲ್ಲಿ ಒಳಗೊಂಡಿರುವ ಹಿರಿಯ ಶಿಕ್ಷಕರೊಬ್ಬರನ್ನು ಯೋಜನೆಯ ನೋಡೆಲ್ ಅಧಿಕಾರಿಯಾಗಿ ನೇಮಿಸುವ ವಿಚಾರವನ್ನು ಪಂಚಾಯತ್ ಕಾರ್ಯದರ್ಶಿ ಆದೇಶವಾಗಿ ಪ್ರಕಟಿಸಬೇಕು. ಮೈಕ್ರೋ ಕಂಟೈನ್ಮೆಂಟ್ ಝೋನ್ ಆಗಿರುವ ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ನ ಮೂಪ್ಪತ್ ನಲ್ಲಿ ಅತ್ಯಧಿಕ ರೋಗಿಗಳಿರುವ ವಾರ್ಡ್ ನಲ್ಲಿ ಲಾಕ್ ಡೌನ್ ಜಾರಿಗೊಳಿಸಬಹುದಾಗಿದೆ ಎಂದು ಆದೇಶಿಸಲಾಗಿದೆ.
ಸಾರ್ವಜನಿಕರೊಂದಿಗೆ ಸತತವಾಗಿ ಸಂಪರ್ಕದಲ್ಲಿರುವ ವ್ಯಕ್ತಿಗಳು, ವ್ಯಾಪಾರಿಗಳು, ವ್ಯಾಪಾರ ಸಂಸ್ಥೇಗಳ ಸಿಬ್ಬಂದಿ, ಆಟೋ-ಟ್ಯಾಕ್ಸಿ ಚಾಲಕರು, ಖಸಗಿ-ಸರಕಾರಿ ಬಸ್ ಗಳ ಸಿಬ್ಬಮದಿ ಮೊದಲಾದವರು 14 ದಿನಗಳಿಗೊಮ್ಮೆ ಉಚಿತ ಕೋವಿಡ್ ತಪಾಸಣೆಗೆ ಒಳಗಾಗಬೇಕು. 45 ವರ್ಷ ಕ್ಕಿಂತ ಅಧಿಕ ವಯೋಮಾನದ ಎರಡು ಡೋಸ್ ವಾಕ್ಸಿನೇಷನ್ ಸ್ವೀಕಾರ ಮಾಡಿರುವವರು, ಸಧ್ಯ ಕೋವಿಡ್ ತಪಾಸಣೆಗೊಳಗಾಗಬೇಕಿಲ್ಲ. ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿ ಪಾಲಿಸಬೇಕು. 45 ವರ್ಷಕ್ಕಿಂತ ಕಡಿಮೆ ವಯೋಮಾನದ ಮಂದಿ ವಾಕ್ಸಿನೇಷನ್ ಸ್ವೀಕಾರ ನಡೆಸುವಂತೆ ಸಮಾಜ ಒತ್ತಾಯಿಸಬೇಕು. ಯುವಜನತೆಯಲ್ಲೂ ಕೋವಿಡ್ ಸಂಬಂಧ ಮರಣ ಸಂಖ್ಯೆ ಅಧಿಕಗೊಳ್ಳುತ್ತಿರುವುದು ಇದರ ಅನಿವಾರ್ಯತೆಯನ್ನು ತಿಳಿಸುತ್ತದೆ. ಈ ಸಂಬಂಧ ಹರಡಲಾಗುಇತ್ತಿರುವ ತಪ್ಪು ಸಂದೆಶಗಳನ್ನು ಯಾರೂ ನಂಬಕೂಡದು ಎಂದವರು ನುಡಿದರು.
ತೀವ್ರತರ ಸೋಂಕು ಹರಡುವಿಕೆಯ ನಿಯಂತ್ರಣ ನಿಟ್ಟಿನಲ್ಲಿ ಎಸ್.ಎಂ.ಎಸ್.(ಮಾಸ್ಕ್, ಸಾನಿಟೈಸರ್, ಸಾಮಾಜಿಕ ಅಂತರ) ಕಡ್ಡಾಯವಾಗಿ ಪಾಲಿಸಬೇಕು. ಇದರ ಅಂಗವಾಗಿ ತಪಾಸಣೆ ಚುರುಕುಗೊಳಿಸಲು ಜಿಲ್ಲಾ ಪೆÇಲೀಸರಿಗೆ ಆದೇಶ ನೀಡಲಾಗಿದೆ. ಇದರಂತೆಯೇ ಮಹತ್ವಿಕೆಯಪೆÇಂದಿಗೆ 45 ವರ್ಷಕ್ಕಿಂತ ಅಧಿಕ ವಯೋಮಾನದ ಮಮದಿಗೆ ವಾಕ್ಸಿನೇಷನ್ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಸೌಲಭ್ಯ ಏರ್ಪಡಿಸಿದೆ. ಎಲ್ಲ ಜನತೆಗೆ ವಾಕ್ಸಿನೇಷನ್ ನೀಡಿಕೆಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ. ಈಗ ಮಕ್ಕಳ ಸಹಿತ 45 ವರ್ಷಕ್ಕಿಂತ ಕಡಿಮೆ ವಯೋಮಾನದ ಮಂದಿಗಾಗಿ ಸಾಮೂಹಿಕ ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜನನಿಭಿಡತೆಯಿರುವ ಪ್ರದೇಶಗಳಿಂದ ಆಗಮಿಸುವ ಮಂದಿ ಆರ್.ಟಿ.ಪಿ.ಸಿ.ಆರ್ ತಪಾಸಣೆಗೆ ಒಳಗಾಗಬೇಕು. ಜನ ಗುಂಪುಗೂಡುವ ಸಾಧ್ಯತೆಯ ಪ್ರದೇಶಗಳಲ್ಲಿ ರೋಗ ಹರಡುವಿಕೆಯ ಭೀತಿಯೂ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಪೇಟೆಗಳಲ್ಲಿ ಕಟ್ಟುನಿಟ್ಟು ಏರ್ಪಡಿಸಲು ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರ ತೀರ್ಮಾನಿಸಿದೆ. ತಪಾಸಣೆ ನಡೆಸುವ ನಿಟ್ಟಿನಲ್ಲಿ ನಗರಗಳಿಗೆ ತೃಲಬೇಕಿಲ್ಲ. ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ, ಜೊತೆಗೆ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ವಾಕ್ಸಿನೇಷನ್ ಮತ್ತು ಆರ್.ಟಿ.ಪಿ.ಸಿ.ಆರ್. ತಪಾಸಣೆ ನಡೆಸಬಹುದಾಗಿದೆ.
ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಹೆಚ್ಚುವರಿ ದಂಡನಾಧಿಕಾರಿ ಅತುಲ್ ಸ್ವಾಮಿನಾಥ್, ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಮೊದಲಾದವರು ಉಪಸ್ಥಿತರಿದ್ದರು.







