HEALTH TIPS

ವಿಧಾನಸಭಾ ಚುನಾವಣೆ: 80 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಡಿಸಿಸಿ ಅಧ್ಯಕ್ಷರ ಸಭೆ: ಯುಡಿಎಫ್ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದೆ: ನೇಮಂ ಮತ್ತು ಮಂಜೇಶ್ವರದಲ್ಲಿ ಸಿಪಿಎಂ ಮತಗಳು ಬಿಜೆಪಿಗೆ!: ಮುಲ್ಲಪ್ಪಳ್ಳಿ

                             

           ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಖಚಿತವಾಗಿ ಜಯಶಾಲಿಯಾಗುವುದು ಎಂದು ಕೆಪಿಸಿಸಿ ಅಂದಾಜು ಮಾಡಿದೆ. 80 ಸ್ಥಾನಗಳನ್ನು ಗೆಲ್ಲುವ ಮೂಲಕ ಯುಡಿಎಫ್ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ಸರ್ಕಾರದ ವಿರುದ್ಧ ಪ್ರತಿಭಟನಾ ಅಲೆಗಳು ಚುನಾವಣೆಯ ಒಂದು ವಾರಗಳ ಹಿಂದೆ ವ್ಯಕ್ತವಾಗಿತ್ತೆಂದು ಮೂಲಗಳು ತಿಳಿಸಿವೆ. 

                ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ  ಡಿಸಿಸಿ ಅಧ್ಯಕ್ಷರ ಸಭೆಯಲ್ಲಿ ಈ ಮೌಲ್ಯಮಾಪನ ಮಾಡಲಾಗಿದೆ. ಅಭಿಪ್ರಾಯ ಬೇಧಗಳನ್ನು ಮರೆತು ಯುಡಿಎಫ್ ಕಾರ್ಯಕರ್ತರು ಗೆಲುವಿಗಾಗಿ ಒಟ್ಟಾಗಿ ಕೆಲಸ ಮಾಡಿದ್ದರು. ಕೇರಳದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಚುನಾವಣಾ ಪ್ರವಾಸಗಳು ಯುಡಿಎಫ್‍ಗೆ ಉತ್ತೇಜನ ನೀಡಿವೆ ಎಂದು ಕೆಪಿಸಿಸಿ ಅಂದಾಜಿಸಿದೆ.

         ನೇಮಂನಲ್ಲಿ ಯುಡಿಎಫ್ ಉತ್ತಮ ಸ್ಪರ್ಧೆ ನೀಡಿತ್ತು. ನೇಮಂನಲ್ಲಿ ಸೋಲಿನ ಭೀತಿಯಿಂದ ಸಿಪಿಎಂ ಕೋಮು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮತ ವಿಭಜನೆ ಮಾಡಿದೆ. ಇದು ನೇಮಂ ನಲ್ಲಿ  ಯುಡಿಎಫ್ ನ ವಿಜಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಾಯಕರು ಹೇಳಿದರು.

                ಎರ್ನಾಕುಳಂ ಜಿಲ್ಲೆಯ, 11 ಕ್ಷೇತ್ರಗಳಲ್ಲಿ ಅದ್ಭುತ ಗೆಲುವು ಸಾಧಿಸಲಿದೆ ಎಂದು ಹೇಳಲಾಗಿದೆ. ಟ್ವೆಂಟಿ -20 ಯನ್ನು ಸವಾಲಿನಿಂದ ಎದುರಿಸಿದ ಕುನ್ನತ್ತುನಾಡಿನಲ್ಲಿ ಯುಡಿಎಫ್ ಅಭ್ಯರ್ಥಿ ಗೆಲ್ಲಲಿದ್ದಾರೆ.

ಮಲಬಾರ್ ಪ್ರದೇಶದಲ್ಲಿ, ಯುಡಿಎಫ್ ಕಳೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಬಲಗೊಳ್ಳಲಿದೆ.  ಸಿಪಿಎಂ ಪಕ್ಷ ಮಂಜೇಶ್ವರದಲ್ಲಿ ಬಿಜೆಪಿಗೆ ಮತ ಚಲಾಯಿಸಿದರೂ, ಯುಡಿಎಫ್ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ನಾಯಕರಲ್ಲಿದೆ. ಪೋಸ್ಟಲ್ ಮತದಾನದಲ್ಲಿ ಅಕ್ರಮಗಳು ನಡೆಯದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ಡಿಸಿಸಿ ಅಧ್ಯಕ್ಷರಿಗೆ ನಿರ್ದೇಶನ ನೀಡಿದರು.

             ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳು ರಿಟನಿರ್ಂಗ್ ಅಧಿಕಾರಿಗೆ ಲಿಖಿತ ಅರ್ಜಿಯನ್ನು ಅಂಚೆ ಮತಗಳ ನಿಖರ ಎಣಿಕೆ ಕೋರಿ ಸಲ್ಲಿಸಬೇಕು. ಅಂಚೆ ಮತದಾನದ ಸೋಗಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಮತ್ತು ಸಿಪಿಎಂ ಇದರ ಸೂತ್ರದಾರಿಯಾಗಿದೆ ಎಂದು ನಾಯಕರು ಆರೋಪಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries