HEALTH TIPS

ಉತ್ತರ ಪ್ರದೇಶದಲ್ಲಿ ವೃದ್ಧೆಯರಿಗೆ ಕೊರೊನಾ ಲಸಿಕೆ ಬದಲಿಗೆ Anti-ರೇಬಿಸ್ ಲಸಿಕೆ!

            ಲಕ್ನೋ : ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಲಸಿಕೆ ಅಭಾವದಿಂದ ಲಸಿಕಾ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ. ಇದರ ಮಧ್ಯೆ ರಾಜ್ಯದಲ್ಲಿ ಮೂವರು ವೃದ್ಧೆಯರಿಗೆ ಕೊವಿಡ್-19 ಲಸಿಕೆ ಬದಲಿಗೆ Anti-ರೇಬಿಸ್ ಲಸಿಕೆ ನೀಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.


        ಉತ್ತರ ಪ್ರದೇಶದ ಶಮ್ಲಿ ಎಂಬಲ್ಲಿ ಆಂಟಿ-ರೇಬಿಸ್ ಲಸಿಕೆ ಪಡೆದ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ. 70 ವರ್ಷದ ಸರೋಜಾ, 72 ವರ್ಷದ ಅನಾರ್ಕಲಿ ಮತ್ತು 60 ವರ್ಷದ ಸತ್ಯವತಿ ಅವರು ಕೊರೊನಾವೈರಸ್ ಲಸಿಕೆ ಪಡೆಯುವುದಕ್ಕಾಗಿ ಕಂಧ್ಲಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು.

       ಕೊವಿಡ್-19 ಲಸಿಕೆ ಪಡೆಯಲು ತೆರಳಿದ್ದ ವೃದ್ಧೆಯರಿಗೆ ಆಂಟಿ-ರೇಬಿಸ್ ಲಸಿಕೆ ನೀಡಿದರ ಬಗ್ಗೆ ಪ್ರಮಾಣಪತ್ರ ಒದಗಿಸಲಾಯಿತು. ಇದರಿಂದ ಕೆರಳಿದ ಕುಟುಂಬದ ಸದಸ್ಯರು ಆರೋಗ್ಯ ಕೇಂದ್ರ ಎದುರಿನಲ್ಲೇ ಪ್ರತಿಭಟನೆ ನಡೆಸಿದರು.

                      ವೈದ್ಯಕೀಯ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ:

     ಕೊರೊನಾವೈರಸ್ ಲಸಿಕೆ ಬದಲಿಗೆ ರೇಬಿಸ್ ಲಸಿಕೆಯನ್ನು ನೀಡಿದ ಆರೋಗ್ಯ ಸಿಬ್ಬಂದಿ ವಿರುದ್ಧ ಕುಟುಂಬ ಸದಸ್ಯರು ಆಕ್ರೋಶ ಹೊರಹಾಕಿದರು. ಕುಟುಂಬ ಸದಸ್ಯರ ಆಗ್ರಹದ ಹಿನ್ನೆಲೆ ಈ ಘಟನೆಗೆ ಕಾರಣರಾದ ವೈದ್ಯಕೀಯ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಲಾಗುತ್ತದೆ. ಇದರ ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಕೇಂದ್ರ ಉಸ್ತುವಾರಿ ಬೀಜೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries