HEALTH TIPS

ರಸಗೊಬ್ಬರ : ಬೆಲೆ ಹೆಚ್ಚಿಸದಿರಲು ಕೇಂದ್ರ ಸರ್ಕಾರದ ಸೂಚನೆ

         ನವದೆಹಲಿ : ರಸಗೊಬ್ಬರಗಳ ಬೆಲೆಯನ್ನು ಹೆಚ್ಚಿಸಬಾರದು ಎಂದು ಭಾರತ ಸರ್ಕಾರ ರಸಗೊಬ್ಬರ ಉತ್ಪದಾಕ ಕಂಪೆನಿಗಳಿಗೆ ಹೇಳಿರುವುದಾಗಿ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನಸುಖ್​ ಮಾಂಡವೀಯ ಹೇಳಿದ್ದಾರೆ.

         ಡೈ ಅಮೋನಿಯಂ ಫಾಸ್ಫೇಟ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆಯನ್ನು ಹೆಚ್ಚಿಸಿವೆ ಎಂಬ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಉತ್ಪಾದಕರೊಂದಿಗೆ ಇಂದು ಸಭೆ ನಡೆಸಿದ ಸಚಿವರು, 'ಪ್ರಸ್ತುತ ಸಂದರ್ಭಗಳಲ್ಲಿ ರಸಗೊಬ್ಬರಗಳ ಬೆಲೆಯಲ್ಲಿ ತಕ್ಷಣದ ಹೆಚ್ಚಳ ಮಾಡದಿರುವಂತೆ ನಿರ್ಧರಿಸಲಾಗಿದೆ' ಎಂದು ಹೇಳಿದರು.

     ಜಾಗತಿಕ ಮಾರುಕಟ್ಟೆಯಲ್ಲಿ ಪೊಟ್ಯಾಶ್ ಮತ್ತು ಫಾಸ್ಫೇಟ್ ಬೆಲೆಗಳು ಮೇಲಕ್ಕೇರಿದ ನಂತರ ರಸಗೊಬ್ಬರ ಕಂಪೆನಿಗಳು ಈ ವಾರ ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಗಿ ಬೆಲೆ ಏರಿಸಿದ್ದವು ಎಂದು ವರದಿಗಳು ಸೂಚಿಸಿದ್ದವು.

      ಷೇರು ಮಾರುಕಟ್ಟೆಯಲ್ಲಿ ದೀಪಕ್ ಫರ್ಟಿಲೈಸರ್ಸ್​​ನ ಷೇರುಗಳ ಬೆಲೆ ಶೇ 3.63 ರಷ್ಟು, ರಾಮ ಫಾಸ್ಫೇಟ್ಸ್​​​ನ ಷೇರುಗಳು ಶೇ .2.73 ರಷ್ಟು, ರಾಷ್ಟ್ರೀಯ ಕೆಮಿಕಲ್ಸ್​ ಅಂಡ್​ ಫರ್ಟಿಲೈಸರ್ಸ್​ ಕಂಪೆನಿಯ ಷೇರುಗಳು ಶೇ. 3 ರಷ್ಟು ಮತ್ತು ಎಸ್‌ಪಿಐಸಿಯ ಷೇರುಗಳು ಶೇ 3.3 ರಷ್ಟು ಕುಸಿದಿವೆ ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries