HEALTH TIPS

ಜಗತ್ತಿನ ಅತಿ ಎತ್ತರದ ಸೇತುವೆಯ ಕಮಾನು ಕಾಮಗಾರಿ ಪೂರ್ಣ

              ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಚೇನಬ್ ನದಿಪಾತ್ರದ ಮೇಲಿರುವ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆಯ ಕಮಾನು ನಿರ್ಮಾಣ ಸೋಮವಾರ ಪೂರ್ಣಗೊಂಡಿದೆ.

       1.3 ಕಿ.ಮೀ. ಉದ್ದದ ಈ ಸೇತುವೆ ಕಾಶ್ಮೀರ ಕಣಿವೆಯ ಸಂಪರ್ಕವನ್ನು ಉತ್ತೇಜಿಸುವ ಗುರಿ ಹೊಂದಿದೆ. ಉಧಮ್‌ಪುರ-ಶ್ರೀನಗರ-ಬಾರಮುಲ್ಲಾ ರೈಲ್ವೆ ಲಿಂಕ್ (ಯುಎಸ್‌ಬಿಆರ್‌ಎಲ್) ಯೋಜನೆಯ ಭಾಗವಾಗಿ 1,486 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ.

        ಚೇನಬ್ ನದಿಯ 359 ಮೀಟರ್ ಎತ್ತರದಲ್ಲಿರುವ ಈ ಸೇತುವೆ ಪ್ಯಾರಿಸ್‌ನ ಐಫೆಲ್ ಗೋಪುರಕ್ಕಿಂತ 35 ಮೀಟರ್ ಎತ್ತರದಲ್ಲಿದೆ. ಒಂದು ವರ್ಷದಲ್ಲಿ ಈ ಸೇತುವ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ.

         ಕಮಾನಿನ ಅತಿ ಎತ್ತರದ ಸ್ಥಳಕ್ಕೆ 5.6 ಮೀಟರ್‌ನ ಕೊನೆಯ ಲೋಹದ (ಮುಚ್ಚುವ ಭಾಗ) ತುಂಡನ್ನು ಅಳವಡಿಸಲಾಯಿತು ಎಂದು ರೈಲ್ವೆ ಸಚಿವಾಲಯ ಸೋಮವಾರ ಹೇಳಿದೆ. ರಚನಾತ್ಮಕ ವಿವರಗಳಿಗೆ ಅತ್ಯಾಧುನಿಕ ಟೆಲ್ಕಾ ಸಾಫ್ಟ್‌ವೇರ್ ಅನ್ನು ಬಳಸಲಾಗಿದೆ. ಈ ರಚನಾತ್ಮಕ ಉಕ್ಕು 10 ಡಿಗ್ರಿ ಸೆಲ್ಸಿಯಸ್‌ನಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ಸೂಕ್ತವಾಗಿದೆ. 28,660 ಮೆಟ್ರಿಕ್ ಟನ್ ಉಕ್ಕಿನ ಕಾಮಗಾರಿ, 10 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣಿನ ಕಾಮಗಾರಿ ಹಾಗೂ 66,000 ಕ್ಯೂಬಿಕ್ ಮೀಟರ್ ಕಾಂಕ್ರಿಟ್ ಅನ್ನು ಈ ಸೇತುವೆಯ ನಿರ್ಮಾಣ ಒಳಗೊಂಡಿದೆ ಎಂದು ಉತ್ತರ ರೈಲ್ವೆ ಮ್ಯಾನೇಜರ್ ಅಷುತೋಶ್ ಗಂಗಾಲ್ ಹೇಳಿದ್ದಾರೆ.

          ಈ ಕಮಾನಿನ ಒಟ್ಟು ತೂಕ 10,619 ಮೆಟ್ರಿಕ್ ಟನ್ ಎಂದು ಅವರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries