HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ನಿರ್ಣಾಯಕರಾಗಲಿರುವ ಮೊದಲ ಬಾರಿ ಮತ ಚಲಾಯಿಸಲಿರುವ ಯುವ ಮತದಾರರು

 

              ಕಾಸರಗೋಡು:  ವಿಧಾನಸಭಾ ಚುನಾವಣೆಯಲ್ಲಿ ಮೊದಲ ನಿರ್ಣಾಯಕ ಅಂಶವೆಂದರೆ ಮತದಾರರು. ಅವರು ಅಭ್ಯರ್ಥಿಗಳ ಯಶಸ್ಸಿನ ಭರವಸೆಯಲ್ಲಿ ವಿಶ್ವಾಸವನ್ನು ಮೂಡಿಸುತ್ತಾರೆ. ಸುಮಾರು ಒಂದು ಮಿಲಿಯನ್ ಮತದಾರರನ್ನು ಹೊಂದಿರುವ ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ, ಕಾಸರಗೋಡು ಮತ್ತು ಉದುಮ  ಕ್ಷೇತ್ರಗಳಲ್ಲಿ ಹೊಸ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿರುವುದು ಗಮನಾರ್ಹ. ಅಧಿಕೃತ ಅಂಕಿಅಂಶಗಳ ಪ್ರಕಾರ, 10,59,967  ಮತದಾರರ ಪೈಕಿ  26,339 ಮಂದಿ ಹೊಸ ಮತದಾರರಿದ್ದಾರೆ. ಹೊಸ ಮತದಾರರು ಮಂಜೇಶ್ವರದಲ್ಲಿ 4963, ಕಾಸರಗೋಡು 5725, ಉದುಮಾ 6115, ಕಾಞಂಗಾಡ್ 5056 ಮತ್ತು ತ್ರಿಕ್ಕರಿಪುರ 4480 ರಷ್ಟು ಹೊಸ ಮತದಾರರಿದ್ದಾರೆ. ಮಂಜೇಶ್ವರ, ಕಸರಗೋಡು ಮತ್ತು ಉದುಮಾ ಕ್ಷೇತ್ರಗಳಲ್ಲಿನ ಗೆಲುವು ಮತದಾರರ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.


             ಇತ್ತೀಚಿನ ಅಂಕಿಅಂಶಗಳ ಪ್ರಕಾರ ಮೂರೂ  ಕ್ಷೇತ್ರಗಳಲ್ಲಿ ಬಹುಪಾಲು ನಿರ್ಣಾಕರರಾಗಲಿರುವುದು ಹೊಸ ಮತದಾರರು. ಮೊದಲ ಬಾರಿಗೆ ಮತದಾನಗೈಯ್ಯುವವರಿಗೆ ಈ ಹಿಂದಿನ ಎಲ್ಲಾ ಲೆಕ್ಕಾಚಾರಗಳನ್ನೂ ಬದಲಾಯಿಸಲು ಸಾಧ್ಯವಾಗುತ್ತದೆ ಎಂಬುದು ಅಂದಾಜಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಯುಡಿಎಫ್ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಹೊರಬಂದಾಗ ಎಡಪಂಥೀಯ ಮತ್ತು ಬಿಜೆಪಿ ಜಿಲ್ಲೆಯಲ್ಲಿ ತಮ್ಮ ಸ್ಥಾನವನ್ನು ಸುಧಾರಿಸಿಕೊಂಡಿದ್ದವು. ಬಿಜೆಪಿಯ ಭದ್ರಕೋಟೆಗಳಾದ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳಲ್ಲಿ ಅವರು ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯವಾಯಿತು. ಆದ್ದರಿಂದ   ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಮತ್ತು ಕಾಸರಗೋಡಲ್ಲಿ ಬಿಜೆಪಿ ಮುನ್ನಡೆಯಲಿದೆ ಎಂಬ ಸೂಚನೆಗಳಿವೆ. 


                ಈ ವಿಶ್ವಾಸದಿಂದಾಗಿ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದೇ ವೇಳೆ ಮೂರೂ ರಂಗಗಳು ಹೊಸ ಮತದಾರರು ತಮ್ಮ ಪರವಾಗಿ ಮತ ಚಲಾಯಿಸುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. 2019 ರ ಲೋಕಸಭಾ ಚುನಾವಣೆ ಮತ್ತು ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ, ಜಿಲ್ಲೆಯ ಮೂರು ರಂಗಗಳ ನಡುವಿನ ಅಂತರವು ಕಡಿಮೆಯಾಗುತ್ತಿದೆ ಮತ್ತು ಮೊದಲ ಬಾರಿಗೆ ಮತ ಚಲಾಯಿಸಲಿರುವವರು ಯಾರಿಗೆ ಮತ ನೀಡುತ್ತಾರೆಂಬ ಅಂಶದ ಮೇಲೆ ಸೋಲು-ಗೆಲುವಿನ ಲೆಕ್ಕಜಾಚಾರ ಕುತೂಹಲಕಾರಿಯಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries