ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ತೀವ್ರ ರೀತಿಯ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರ ಸಾಮೂಹಿಕ ವ್ಯಾಕ್ಸಿನೇಷನ್ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಕ್ರಶಿಂಗ್ ದಿ ಕರ್ವ್ ಹೆಸರಿನಲ್ಲಿ ವ್ಯಾಕ್ಸಿನೇಷನ್ ವಿಸ್ತರಿಸಲು ತೀರ್ಮಾನಿಸಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವುದು ಕ್ರಿಯಾ ಯೋಜನೆಯ ಗುರಿಯಾಗಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಲಸಿಕೆ ವಿತರಿಸಲಾಗುತ್ತಿದೆ. ಕೋವಿಡ್ ಲಸಿಕೆಯನ್ನು ರಾಜ್ಯದ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ನೀಡಲಾಗುತ್ತದೆ. ಇತರರಿಗೆ ನೀಡುವ ಯೋಜನೆಗಳು ವೇಗವಾಗಿ ಪ್ರಗತಿಯಲ್ಲಿವೆ.
ಏಪ್ರಿಲ್ ತಿಂಗಳು ರಾಜ್ಯಕ್ಕೆ ನಿರ್ಣಾಯಕವಾದ ಕಾರಣ ಕೋವಿಡ್ ರಕ್ಷಣಾತ್ಮಕ ಕಾರ್ಯಾಚರಣೆಯನ್ನು ಬಲಪಡಿಸುತ್ತಿದೆ. ಯಾವುದೇ ರಾಜಿ ಇಲ್ಲದ ನಿರ್ಬಂಗಳನ್ನು ವಿಧಿಸಲಾಗುವುದು. ಎಲ್ಲರೂ ಜಾಗರೂಕರಾಗಿರಬೇಕು ಎಂದು ಆರೋಗ್ಯ ಸಚಿವರು ಹೇಳಿರುವರು.





