ಕಾಸರಗೋಡು : ಮಂಗಳವಾರ ನಡೆಯುವ ವಿದಾನಸಭೆ ಕ್ಷೇತ್ರಗಳ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯ 738 ಮತಗಟ್ಟೆಗಳ ಲೈವ್ ವೆಬ್ ಕಾಸ್ಟಿಂಗ್ ವ್ಯವಸ್ಥೆಯ ಪೂರ್ವಭಾವಿ ಟ್ರಯಲ್ ರನ್ ಮತ್ತು ಪೆÇೀಲ್ ಮಾನಿಟರಿಂಗ್ ಡಿ.ಡಿ.ಪಿ. ಸಭಾಂಗಣದಲ್ಲಿ ಸೋಮವಾರ ಜರುಗಿತು.
10 ಮಂದಿ ಪೆÇೀಲ್ ಮಾನಿಟರಿಂಗ್ ಗೆ ಮತ್ತು ಇಬ್ಬರು ಡಿಸೆಗನೇಟೆಡ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಾಸರಗೋಡು ಸಿವಿಲ್ ಸ್ಟೇಷನ್ ಆವರಣದ ಪಂಚಾಯತ್ಡೆಪ್ಯೂಟಿ ಡೈರೆಕ್ಟರ್ ಆಪೀಸ್ ನಲ್ಲಿ ಸಿದ್ಧಪಡಿಸಿರುವ ನಿಯಂತ್ರಣ ಕೊಠಡಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ಪೆÇಲೀಸ್ ನಿರೀಕ್ಷಕಿ, ಜಿಲ್ಲೆಯ ಮತಗಟ್ಟೆಗಳ ಆಗುಹೋಗುಗಳ ಅವಲೋಕನ ನಡೆಸಿ , ಅಗತ್ಯದ ಕ್ರಮ ಕೈಗೊಳ್ಳುವರು.

