ಕಾಸರಗೋಡು: ಬಾಹ್ಯ ವ್ಯಕ್ತಿಗಳು ಕೆಲವರು ಚುನಾವಣೆ ಅಂಗವಾಗಿ ಜಿಲ್ಲೆರಯ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ತಂಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಅಂಥವರು ತಕ್ಷಣ ವಿಧಾನಸಭೆ ಕ್ಷೇತ್ರಗಳನ್ನು ಬಿಟ್ಟು ತೆರಳಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಬಾಹ್ಯ ವ್ಯಕ್ತಿಗಳು ಏ.5ರಂದು ಬೆಳಗ್ಗೆ 6 ಗಂಟೆಗೆ ಮುಂಚಿತವಾಗಿ ವಿಧಾನಸಭೆ ಕ್ಷೇತ್ರಗಳನ್ನು ಬವಿಟ್ಟು ತೆರಳಬೇಕು ಎಂಬ ಆದೇಶವಿದೆ. ಸದ್ದಿಲ್ಲದ ಪ್ರಚಾರದ ಅವಧಿಯಲ್ಲಿ ಆಯಾ ಏಜೆನ್ಸಿಗಳ ಮತದಾತರು ಮಾತ್ರ ವಿಧಾನಸಭೆ ಕ್ಷೇತ್ರದಲ್ಲಿ ಇರಬೇಕು ಎಂಬ ಚುನಾವಣೆ ಆಯೋಗದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಆದೇಶದ ವಿರುದ್ಧ ಯಾರಾದರು ಬಾಹ್ಯ ವ್ಯಕ್ತಿಗಳು ವಿಧಾನಸಭೆ ಕ್ಷೇತ್ರಗಳಲ್ಲಿ ತಂಗಿರುವುದು ಪತ್ತೆಯಾದಲ್ಲಿ ಬಂಧನ ಸಹಿತ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯ ಹೋಟೆಲ್/ ಲಾಡ್ಜ್/ ವಿವಾಹ ಸಭಾಂಗಣದಲ್ಲಿ ( ನಿಜವಾದ ಯಾತ್ರಾರ್ಥಿಗಳನ್ನು ಹೊರತುಪಡಿಸಿ) ತಪಾಸಣೆ ನಡೆಸಲಾಗುವುದು ಎಂದವರು ನುಡಿದರು.

