HEALTH TIPS

ಚುನಾವಣೆ ವೇಳೆ ಕೋವಿಡ್ ಸಂಹಿತೆ ಕಡ್ಡಾಯ: ಸೂಚನೆ

     ಕಾಸರಗೋಡು: ವಿಧಾನಸಭೆ ಚುನಾವಣೆ ಮಂಗಳವಾರ ನಡೆಯಲಿದ್ದು, ಕಾಸರಗೋಡು ಜಿಲ್ಲೆಯ ಮತಗಟ್ಟೆಗಳಲ್ಲಿ ಕೋವಿಡ್ ಸಂಹಿತೆ ಪ್ರಧಾನವಾಗಿರುವುದು.  

              ಪ್ರತಿ ಮತಗಟ್ಟೆಯಲ್ಲೂ ಥರ್ಮಲ್ ಸ್ಕಾನಿಂಗ್ ಉಪಕರಣಗಳು ಇವೆ ಎಂಬುದನ್ನು ಪೆÇೀಲಿಂಗ್ ಸಿಬ್ಬಂದಿ ಖಚಿತಪಡಿಸಬೇಕು. 4 ತಾಸುಗಳ ಅಂತರದಲ್ಲಿ ಬದಲಿಸಿ ಬಳಸುವ ರೀತಿಯಲ್ಲಿ 3 ಪಿ.ಪಿ.ಇ. ಕಿಟ್ ಗಳನ್ನೂ ನೀಡಲಾಗುವುದು.  

            ಬ್ರೇಕ್ ದಿ ಚೈನ್ ಖಚಿತಪಡಿಸುವ ನಿಟ್ಟಿನಲ್ಲಿ ಪ್ರತಿ ಮತಗಟ್ಟೆಯಲ್ಲೂ 200 ಮಿ.ಲೀ. ಹ್ಯಾಂಡ್ ವಾಷ್, 500 ಮಿ.ಲೀ. ಸಾನಿಟೈಸರ್ , ತಲಾ 10 ಬ್ರೇಕ್ ದಿ ಚೈನ್ ಕಿಟ್ ಖಚಿತಪಡಿಸಲಾಗುವುದು.

           ಮತದಾತರಲ್ಲಿ ಯಾರಾದರೂ ಮಾಸ್ಕ್ ಧರಿಸದೇ ಮತದಾನಕ್ಕೆ ಅವರಿಗಾಗಿ ಮತಗಟ್ಟೆಯಲ್ಲಿ 200 ತ್ರಿ ಲೆಯರ್ ಮಾಸ್ಕ್ ಕಾರ್ನರ್ ಪ್ರತಿ ಮತಗಟ್ಟೆಯಲ್ಲೂ ಇರಬೇಕು.

                               ಮತದಾತರಿಗಾಗಿ ಏಕಕಾಲಕ್ಕೆ ಬಳಸುವ 2 ಸಾವಿರ ಪ್ಲಾಸ್ಟಿಕ್ ಗ್ಲೌಸ್ ಪ್ರತಿ ಮತಗಟ್ಟೆಯಲ್ಲೂ ವಿತರಿಸಲಾಗುವುದು.

                                 3 ಎನ್.95 ಮಾಸ್ಕ್ ಗಳು, ಮೂರು ರೋಗಾಣು ಮುಕ್ತಗೊಳಿಸಲಾದ ಗ್ಲೌಸ್ ಗಳು, ಒಂದು ಫೇಸ್ ಶೀಲ್ಡ್ (ಏಕಕಾಲಕ್ಕೆ ಬಳಸುವ ರೀತಿಯದ್ದು), 200 ಮಿ.ಲೀ. ಹ್ಯಾಂಡ್ ಸಾನಿಟೈಸರ್ ಇತ್ಯಾದಿ ಅಳವಡಗೊಂಡಿರುವ 10 ಕೋವಿಡ್ 19 ಪೆÇ್ರಟೆಕ್ಷನ್ ಕಿಟ್ ಗಳು ಪೆÇೀಲಿಂಗ್ ಅಧಿಕಾರಿಗಳು, ಪೆÇಲೀಸರು, ಸ್ವಯಂ ಸೇವಕರು ಮೊದಲಾದವರಿಗೆ ಪ್ರತಿ ಮತಗಟ್ಟೆಯಲ್ಲೂ ನೀಡಲಾಗುವುದು.

               ಕೋವಿಡ್ ರೋಗಿಗಳು/ ಸಂಶಯ ಹೊಂದಿರುವವರು ಆಗಿರುವ ಮತದಾತರು ಆಗಮಿಸುವ ಮತಗಟ್ಟೆಗಳಲ್ಲಿ ಕೊನೆಯ ತಾಸುಗಳಲ್ಲೂ ಎಲ್ಲ ಪೆÇೀಲಿಂಗ್ ಸಿಬ್ಬಂದಿ ಪಿ.ಪಿ.ಇ. ಕಿಟ್ ಧರಿಸಬೇಕು.

                ಚುನಾವಣೆಗೆ ಒಂದು ದಿನ ಮುನ್ನವೇ ಮತಗಟ್ಟೆ ರೋಗಾಣುಮುಕ್ತ ಗೊಳಿಸಬೇಕು.

         ಎಲ್ಲ ಮತಗಟ್ಟೆಗಳ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕಾನಿಂಗ್ ಸೌಲಭ್ಯ ಇರುವುದು. ಇದಕ್ಕಾಗಿ ಪರಿಣತ ಆಶಾ ಕಾರ್ಯಕರ್ತೆಯರು, ಪಾರಾ ಮೆಡಿಕಲ್ ಸಿಬ್ಬಂದಿ, ಎನ್.ಎಸ್.ಎಸ್., ಎನ್.ಸಿ.ಸಿ., ವಿದ್ಯಾರ್ಥಿ ಪೆÇಲೀಸ್ ಕೆಡೆಟ್, ಸ್ವಯಂ ಸೇವಕರು ಮೊದಲಾದವರು ಪ್ರವೇಶ ದ್ವಾರದಲ್ಲಿ ಇರುವರು.

          ಮತದಾನಕ್ಕೆ ಸಾಲಾಗಿ ನಿಲ್ಲುವವರು ಸಾಮಾಜಿಕ ಅಂತರ ಪಾಲನೆಗಾಗಿ ನಡೆಸಲಾದ ಗುರುತಿನಲ್ಲೇ ನಿಲ್ಲಬೇಕು.

         15ರಿಂದ 20 ಮಂದಿ ಮತದಾತರು ಏಕಕಾಲಕ್ಕೆ ಸಾಲಾಗಿ ನಿಲ್ಲುವ ವ್ಯ7ವಸ್ಥೆ ಜಾಗದ ಲಭ್ಯತೆ ಹಿನ್ನೆಲೆಯಲ್ಲಿ ಗುರುತು ಹಾಕಲಾಗುವುದು. ಮಹಿಳೆಯರು, ಪುರುಷರು, ವಿಶೇಷ ಚೇತನರು/ಹಿರಿಯ ಪ್ರಜೆಗಳು ಎಂಬ ಮೂರು  ಸಾಲುಗಳು ಇರುವುವು.

      ಮತದಾತರು ಸೂಕ್ತ ರೀತಿ ಸಾಮಾಜಿಕ ಅಂತರ ಪಾಲಿಸುತ್ತಿದ್ದಾರೆ ಎಂಬ ಬಗ್ಗೆ ನಿಗಾ ಇರಿಸಲು ಬೂತ್ ಮಟ್ಟದ ಅಧಿಕಾರಿಗಳು, ಸ್ವಯಂ ಸೇವಕರು ಇರುವರು.

     ಮತಗಟ್ಟೆಗಳಲ್ಲಿ ನೆರಳಿರುವ ಪ್ರದೇಶಗಳಲ್ಲಿ ಆಸನಗ:ಳಿರುವ ಕಾದುಕುಳಿಯತುಕೊಳ್ಳುವ ಕೇಂದ್ರಗಳು ಇರುವುವು.

     ಪ್ರವೇಶ ದ್ವಾರದಲ್ಲಿ, ಹೊರಬದಿಯ ಹಾದಿಯಲ್ಲಿ ಸಾಬೂನು, ನೀರು, ಸಾನಿಟೈಸರ್ ಇರಿಸಲಾಗುವುದು.

      ಮತದಾತರಿಗೆ ಕಾಣಿಸುವ ರೀತಿಯಲ್ಲಿ ಕೋವಿಡ್ 19 ಜನಜಾಗೃತಿ ಭಿತ್ತಿಪತ್ರ ಲಗತ್ತಿಸಲಾಗುವುದು.

       ಮತಗಟ್ಟೆಗಳಲ್ಲಿ ಪೆÇೀಲಿಂಗ್ ಸಿಬ್ಬಂದಿ, ಪೆÇೀಲಿಂಗ್ ಏಜೆಂಟರು ಸಾಮಾಜಿಕ ಅಂತರದೊಂದಿಗೆ ವ್ಯವಸ್ಥೆ ಮಾಡಬೇಕು.

     ಪೆÇೀಲಿಂಗ್ ಏಜೆಂಟ್ ಯಾ ಕೌಂಟಿಂಗ್ ಏಜೆಂಟ್ ಅವರಿಗೆ ಅಳತೆಗೆ ಮೀರಿ ಶಾರೀರಿಕ ಉಷ್ಣಾಂಶ ಇದ್ದಲ್ಲಿ ಅವರನ್ನು ಮರಳುವಂತೆ ಮಾಡಿ , ಬದಲಿಗೆ ಇನ್ನೊಬ್ಬರಿಗೆ ಪ್ರವೇಶಾತಿ ನೀಡಲಾಗುವುದು. ಈ ಮಾಹಿತಿಯನ್ನು ಪ್ರಿಸೈಡಿಂಗ್ ಅಧಿಕಾರಿ ದಾಖಲಾತಿ ನಡೆಸುವರು.

        ದಾಖಲಾತಿಯಲ್ಲಿ ಸಹಿ ಮಾಡುವ, ವಿದ್ಯುನ್ಮಾನ ಮತಯಂತ್ರದ ಗುಂಡಿ ಒತ್ತುವ ಮತದಾತರಿಗೆ ಕೈಗಳಿಗೆ ಗ್ಲೌಸ್ ನೀಡಲಾಗುವುದು.

        ಬಳಕೆಯ ಮಾಹಿತಿ ಸಹಿತ ಅಗತ್ಯದ ಎಲ್ಲ ಕಡೆ ಸಾನಿಟೈಸರ್ ಇರಿಸಲಾಗುವುದು.

         ಕೋವಿಡ್ 19 ಪ್ರತಿರೋಧ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಿ ಮತದಾನ ನಡೆಯಲಿದೆ. ಕೊನೆಯ ತಾಸುಗಳಲ್ಲಿ ಕ್ವಾರೆಂಟೈನ್ ನಲ್ಲಿರುವ ಮಂದಿ ಆರೋಗ್ಯ ಕಾರ್ಯಕರ್ತರ ಮೇಲ್ನೋಟದಲ್ಲಿ ಮತದಾನ ನಡೆಸಬಹುದು. ಕೋವಿಡ್ ರೋಗಿಗಳು, ಸಂಶಯವಿರುವವರು  ಪಿ.ಪಿ.ಇ. ಕಿಟ್, ಹ್ಯಾಂಡ್ ಗ್ಲೌಸ್, ಎನ್.95 ಮಾಸ್ಕ್ ಇತ್ಯಾದಿ ಧರಿಸಿ ಮಾತ್ರ ಮತದಾನ ನಡೆಸಲು ಅನುಮತಿಯಿದೆ.

         ಕಂಟೈನ್ಮೆಂಟ್ ಝೋನ್/ ಮೈಕ್ರೋ ಕಂಟೆನ್ಮೆಂಟ್ ಝೋನ್ ನಲ್ಲಿ ವಾಸಿಸುವ ಮತದಾತರು ಕೇಂದ್ರ ಗೃಹ ಖಾತೆ ಪ್ರಕಟಿಸಿರುವ ಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು.

           ಸ್ಲಿಪ್ ವಿತರಣೆ ನಡೆಸಲು ಇಬ್ಬರಿಗಿಂತ ಅಧಿಕ ಮಂದಿ ಇರಕೂಡದು. ವಿತರಕರು ಮಾಸ್ಕ್, ಗ್ಲೌಸ್ ಧರಿಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries