ಕಾಸರಗೋಡು: ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಠ್ಯಬ್ದ ಸಂಭ್ರಮ 2021 ಜ್ಞಾನವಾಹಿನಿ ಕಾಸರಗೋಡು ವಲಯ ಸಮಿತಿ ಮತ್ತು ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ನೇತೃತ್ವದಲ್ಲಿ ಎ.19, 20, 21 ರಂದು ಹರಿಕಥಾ ಸತ್ಸಂಗ, ಹನುಮಾನ್ ಚಾಲಿಸ್
ಪಠಣ, ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.
ಎ.19 ರಂದು ಸಂಜೆ 4 ಗಂಟೆಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರಿಗೆ ಪೂರ್ಣಕುಂಭ ಸ್ವಾಗತ, ದೀಪ ಪ್ರಜ್ವಲನೆ, ಆಶೀರ್ವಚನ ನಡೆಯಲಿದೆ. ಹಿರಿಯ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ವಿಶೇಷ ಅಭ್ಯಾಗತರಾಗಿ ಡಾ.ಅನಂತ ಕಾಮತ್, ಕೆ.ಸುರೇಶ್, ರಾಂ ಪ್ರಸಾದ್, ಅಭ್ಯಾಗತರಾಗಿ ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಭಾಗವಹಿಸುವರು. ಕೆ.ಎನ್.ವೆಂಕಟ್ರಮಣ ಹೊಳ್ಳ ಉಪಸ್ಥಿತರಿರುವರು. ಸಂಜೆ 5 ಕ್ಕೆ ಹನುಮಾನ್ ಚಾಲಿಸ್ ಪಠಣ, 5.30 ಕ್ಕೆ ಹರಿಕಥಾ ಸತ್ಸಂಗ ನಡೆಯಲಿದೆ.
ಎ.20 ರಂದು ಸಂಜೆ 4 ಕ್ಕೆ ಪರಮಪೂಜ್ಯ ಸಾದ್ವಿ ಶ್ರೀ ಮಾತಾನಂದಮಯಿ ಒಡಿಯೂರು ಅವರಿಗೆ ಪೂರ್ಣಕುಂಭ ಸ್ವಾಗತ, ದೀಪ ಪ್ರಜ್ವಲನೆ, ಆಶೀರ್ವಚನ ನಡೆಯಲಿದೆ. ಡಾ.ಜಯಶ್ರೀ ನಾಗರಾಜ, ಪ್ರೇಮಲತಾ ಎಲ್ಲೋಜಿ ರಾವ್, ಸವಿತಾ ಟೀಚರ್ ಉಪಸ್ಥಿತರಿರುವರು. ಹನುಮಾನ್ ಚಾಲಿಸ್ ಪಠಣ, ಸಾಮೂಹಿಕ ಕುಂಕುಮಾರ್ಚನೆ, ಹರಿಕಥಾ ಸತ್ಸಂಗ ನಡೆಯಲಿದೆ.
ಎ.21 ರಂದು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಅವರಿಗೆ ಪೂರ್ಣಕುಂಭ ಸ್ವಾಗತ, ದೀಪ ಪ್ರಜ್ವಲನೆ, ಆಶೀರ್ವಚನ ನಡೆಯಲಿದೆ. ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ವಿಶೇಷ ಅಭ್ಯಾಗತರಾಗಿ ಕೆ.ಎಸ್.ಲಕ್ಷ್ಮೀಪತಿ ರಾವ್ ಮಾಡೂರು, ಅಭ್ಯಾಗತರಾಗಿ ಶ್ರೀಕಾಂತ್, ಕೃಷ್ಣ ಪ್ರಸಾದ್ ಕೋಟೆಕಣಿ, ಶರತ್ ಕುಮಾರ್ ಭಾಗವಹಿಸುವರು. ಹನುಮಾನ್ ಚಾಲಿಸ್ ಪಠಣ, ಹರಿಕಥಾ ಸತ್ಸಂಗ ನಡೆಯಲಿದೆ.




