ಕೊಚ್ಚಿ: ಕೊಚ್ಚಿಯಿಂದ ವಿದೇಶಗಳಿಗೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ದೇಶದಲ್ಲಿ ಕೊರೋನಾ ಹರಡುವುದು ತೀವ್ರಗೊಳ್ಳುತ್ತಿದ್ದಂತೆ, ಹಲವಾರು ದೇಶಗಳು ಭಾರತದಿಂದ ವಿಮಾನ ಹಾರಾಟವನ್ನು ನಿಷೇಧಿಸಿದ್ದವು. ಈ ಪರಿಸ್ಥಿತಿಯಲ್ಲಿ, ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಿ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.
ಪ್ರಸ್ತುತ, ದೋಹಾ ಮತ್ತು ಬಹ್ರೇನ್‍ಗೆ ಕೆಲವೇ ವಿಮಾನಗಳ ಹಾರಾಟ ನಡೆಸುತ್ತಿವೆ. ಮುಂದಿನ 10 ದಿನಗಳವರೆಗೆ ವಿದೇಶದಿಂದ ಕೊಚ್ಚಿಗೆ ವಿಮಾನಯಾನ ಮುಂದುವರಿಯಲಿದೆ. ವಿದೇಶದಿಂದ ಪ್ರಯಾಣಿಕರನ್ನು ಇಳಿಸಿದ ಬಳಿಕ ಇವು ಪ್ರಯಾಣಿಕರಿಲ್ಲದೆ ಮರಳುತ್ತವೆ.
ಕೊಚ್ಚಿಯಿಂದ ಸುಮಾರು 90 ಪ್ರತಿಶತದಷ್ಟು ಅಂತರರಾಷ್ಟ್ರೀಯ ಸೇವೆಗಳು ಕೊಲ್ಲಿ ಪ್ರದೇಶಕ್ಕೆ ತೆರಳುತ್ತವೆ. ಕೊಲ್ಲಿ ರಾಜ್ಯಗಳಾದ ಕುವೈತ್, ಯುಎಇ ಮತ್ತು ಸೌದಿ ಅರೇಬಿಯಾ ಭಾರತದಿಂದ ಬರುವ ಪ್ರಯಾಣಿಕರನ್ನು ನಿಷೇಧಿಸಿವೆ. ಸಿಂಗಾಪುರ, ಕೌಲಾಲಂಪುರ್, ಯುಕೆ, ಯುಎಸ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಕೆನಡಾಗಳೂ ವಿಮಾನಗಳನ್ನು ನಿಷೇಧಿಸಿವೆ.





