ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ಹರಡುತ್ತಿರುವುದು ವ್ಯಾಪಕಗೊಳ್ಳುತ್ತಿದ್ದು, ಹೆಚ್ಚಿನ ಡೊಮಿಸಿಲಿಯರಿ(ಗೃಹ) ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸರ್ಕಾರ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ. ಡೊಮಿಸಿಲಿಯರಿ ಕೇರ್ ಸೆಂಟರ್ ಎನ್ನುವುದು ರೋಗಲಕ್ಷಣಗಳಿಲ್ಲದ ಸೋಂಕಿತರಿಗೆ ಮತ್ತು ಮನೆಯಲ್ಲಿ ಕ್ಯಾರೆಂಟೈನ್ ಸೌಲಭ್ಯಗಳನ್ನು ಹೊಂದಿರದ ಕೊರೋನಾ ರೋಗಿಗಳನ್ನು ಮೇಲ್ವಿಚಾರಣೆ ಮಾಡುವ ಒಂದು ವ್ಯವಸ್ಥೆಯಾಗಿದೆ.
ಕೊರೋನಾ ಪ್ರಸರಣದ ಆರಂಭಿಕ ಹಂತಗಳಲ್ಲಿ, ಅಂತಹ ರೋಗಿಗಳನ್ನು ಕೊರೋನಾ ಫಸ್ಟ್ ಲೈನ್ ಚಿಕಿತ್ಸಾ ಕೇಂದ್ರಗಳಲ್ಲಿ ಗಮನಿಸಲಾಗುತ್ತಿತ್ತು. ಆದರೆ ಅಂತಹ ವ್ಯವಸ್ಥೆ ಬಹುತೇಕ ದುರುಪಯೋಗಗೊಂಡಿತು ಎಂಬ ಆಧಾರದ ಹಿನ್ನೆಲೆಯಲ್ಲಿ ಇಂತಹ ಹೊಸ ವ್ಯವಸ್ಥೆಗೆ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಇಡುಕ್ಕಿ ಜಿಲ್ಲೆಯಲ್ಲಿ ಮೂರು ನಿವಾಸ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ಕೇಂದ್ರವು ರೋಗಿಗಳಿಗೆ 600 ಹಾಸಿಗೆಗಳನ್ನು ಹೊಂದಿರುತ್ತದೆ. ಈ ಕೇಂದ್ರದಲ್ಲಿದ್ದು ಬಳಿಕ ರೋಗಲಕ್ಷಣಗಳು ಕಂಡುಬರುವವರನ್ನು ಸಿಎಫ್‍ಎಲ್‍ಟಿಸಿಗಳಿಗೆ ವರ್ಗಾಯಿಸಲಾಗುತ್ತದೆ. ಅಗತ್ಯವಿದ್ದರೆ ಪ್ರತಿ ತಾಲ್ಲೂಕಿನಲ್ಲಿ ಇಂತಹ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರತಿ ತಾಲೂಕಿನಲ್ಲಿ ಅಗತ್ಯವಿರುವಷ್ಟು ಸಿಎಫ್‍ಎಲ್‍ಟಿಸಿ ವ್ಯವಸ್ಥೆ ಮಾಡುವಂತೆ ಸರ್ಕಾರ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.





