ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪಕ್ಷವಾತ ರೋಗದಿಂದ ಬಳಲುತ್ತಿರುವ ಲಕ್ಷ್ಮಿ ರೈ ಬೇಳ ಕುಟುಂಬಕ್ಕೆ ವಿಶ್ವ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಕೊಡಮಾಡಿದ 20 ಸಾವಿರ ರೂ ಚೆಕ್ಕನ್ನು ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಕುಂಬಳೆ ವಲಯ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ಅವರು ಕುಟುಂಬಕ್ಕೆ ಹಸ್ತಾಂತರಿಸಿದರು. ಬದಿಯಡ್ಕ ಪಂಚಾಯತಿ ಬಂಟರ ಸಂಘದ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಕುಟುಂಬ ಸದಸ್ಯರು ಉಪಸ್ಥಿತರಿದ್ದರು.





