ಕಾಸರಗೋಡು: ಕಳೆದ ಬಾರಿಯ ವಿಶು ಹಬ್ಬ ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಗೌಜು-ಗದ್ದಲಗಳಿಲ್ಲದೆ ಸದ್ದಿಲ್ಲದೆ ನಡೆದು ಹೋಗಿತ್ತು. ಹತ್ತು ವರ್ಷಗಳಿಂದ ಕಾಞಂಗಾಡ್ ಐಂಗೋತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀಕೃಷ್ಣ ವಿಗ್ರಹಗಳನ್ನು ಮಾರಾಟ ಮಾಡುತ್ತಿರುವ ಗಣೇಶ್, ಕಳೆದ ವರ್ಷ ಕೋವಿಡ್ ಸಂದರ್ಭ ತಲೆಕೆಳಗಾಗದ ಲೆಕ್ಕಾಚಾರಗಳನ್ನು ಇನ್ನೂ ಸರಿಪಡಿಸಲು ಹೆಣಗಾಡುತ್ತಿದ್ದಾರೆ. ಯಾರೂ ವಿಗ್ರಹವನ್ನು ಖರೀದಿಸದ ಮತ್ತು ರಸ್ತೆಬದಿ ಮೌನವಾಗಿದ್ದ ದಿನಗಳು ಅವಾಗಿತ್ತು.
ಆದರೆ ಕೋವಿಡ್ ನ ಎರಡನೇ ತರಂಗದ ಈ ವರ್ಷ ಏನಾಗುತ್ತದೋ ಎಂಬ ಕಳವಳದಲ್ಲಿದ್ದ ಗಣೇಶ್ ಪ್ರಸ್ತುತ ಭರವಸೆಯಿಂದ ನಗುಮುಯಖರಾಗಿದ್ದಾರೆ. ಏನಿದ್ದರೂ ಪ್ರಯಾಣ ನಿರ್ಬಂಧಗಳು, ಲಾಕ್ ಡೌನ್ ರಹಿತವಾಗಿ ಹಬ್ಬಾಚರಣೆಗಳು ನಡೆಯುತ್ತಿರುವುದರಿಂದ ಗಣೇಶ್ ಅವರ ಭರವಸೆ ಬಲಗೊಂಡಿದೆ.
ಎಂದಿನಂತೆ ಗಣೇಶ್ ಇದೀಗ ಐಂಗೋತ್ ಹೆದ್ದಾರಿ ಬದಿ ನೂರಾರು ಕೃಷ್ಣ ವಿಗ್ರಹಗಳೊಂದಿಗೆ ರಸ್ತೆ ಬದಿ ಗಿರಾಕಿಗಳ ಬರುವಿಕೆಗೆ ಕಾಯುತ್ತಿದ್ದಾರೆ. ರಾಜಸ್ಥಾನ ಮೂಲದ ಗಣೇಶ್ ತನ್ನ ಜೀವನೋಪಾಯವನ್ನು ಕಾಞಂಗಾಡ್ ಐಂಗೋತ್ ರಾಷ್ಟ್ರೀಯ ಹೆದ್ದಾರಿ ಬದಿ ವಿಗ್ರಹ ವಿಕ್ರಯ ಮಾಡುವ ಮೂಲಕ ಕಂಡುಕೊಂಡವರು. ಶ್ರೀಕೃಷ್ಣನ ವಿಗ್ರಹಗಳು ಸರಳವಾದರೂ ಗಣೇಶ್ ಅವರ ಬಳಿಯಿರುವ ವಿವಿಧ ನಮೂನೆಯ ಕೃಷ್ಣ ವಿಗ್ರಹಗಳು ಸೆಳೆತದ ಶಕ್ತಿಹೊಂದಿರುವಂತಹ ವಿಶೇಷತೆಯದೆಂದೇ ಅವರನ್ನು ತಿಳಿದಿರುವ ಅನೇಕರ ಅಭಿಪ್ರಾಯ. ಸ್ವತಃ ವಿಗ್ರಹಗಳನ್ನು ತಯಾರಿಸುವ ಗಣೇಶ್ ಅವರ ತಯಾರಿಕೆಯ ವಿವಿಧ ನಮೂನೆಯ ಕೃಷ್ಣ ವಿಗ್ರಹಗಳು ವಿಶೇಷವಾಗಿದ್ದು ಬೇಡಿಕೆ ಗಮನಾರ್ಹವಾಗಿ ಬೆಳೆದಿದೆ. ಬೆಲೆಗಳು 100 ರಿಂದ 600 ರೂ. ವರೆಗಿನ ದರದಲ್ಲಿ ಲಭ್ಯವಿದೆ. ಗಣೇಶ್ ಮತ್ತು ಅವರ ಕುಟುಂಬ ಹತ್ತು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ನಿಂದ ಮಾಡಿದ ಕೃಷ್ಣ ವಿಗ್ರಹಗಳನ್ನು ಅಲಂಕಾರಿಕ ಆಭರಣಗಳ ಮಾದರಿಗಳೊಂದಿಗೆ ನಿರ್ಮಿಸಿ ಮಾರಾಟಕ್ಕೆ ಸಜ್ಜುಗೊಳಿಸುತ್ತಿರುವುದು ಆಕರ್ಷಣೀಯವಾಗಿ ಜನ ಬೇಡಿಕೆ ಪಡೆದಿದೆ. ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಅನ್ನು ತಮಿಳುನಾಡಿನಿಂದ ಖರೀದಿಸಲಾಗುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದರೂ, ಗಣೇಶ್ ನಿರ್ಮಿಸುವ ವಿಷು ವಿಶೇಷವಾದ ಉಣ್ಣಿಕೃಷ್ಣ ವಿಗ್ರಹಗಳ ಬೆಲೆಗಳು ಏರಿಕೆಯಾಗಿಲ್ಲ.







