HEALTH TIPS

ಕುರ್ಚಿಗಳನ್ನು ಆಕ್ರಮಿಸಿಕೊಂಡ ಪುರುಷರು, ನೋಡುತ್ತಾ ನಿಂತ ಅಧ್ಯಕ್ಷೆ !

        ಟರ್ಕಿ : ಸಾಮಾಜಿಕ ಜಾಲತಾಣದಲ್ಲಿ ಬಹುಪ್ರಸಾರವಾಗುತ್ತಿರುವ ವಿಡಿಯೋ ತುಣುಕೊಂದರಲ್ಲಿ ಮಹಿಳಾ ಅಧ್ಯಕ್ಷರಿಗೆ ಜಾಗ ಕೊಡದೆ, ಇದ್ದ ಎರಡು ಕುರ್ಚಿಗಳಲ್ಲಿ ಪುರುಷ ಅಧ್ಯಕ್ಷರು ಕುಳಿತುಕೊಂಡ ಪ್ರಸಂಗವೊಂದು ಚರ್ಚೆಗೊಳಗಾಗಿದೆ. ಟರ್ಕಿಯ ಅಧ್ಯಕ್ಷರೊಂದಿಗಿನ ಸಭೆಗಾಗಿ ತೆರಳಿದ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಅರ್ಸುಲಾ ವಾನ್ ಡೆರ್ ಲೆಯೆನ್ ಅವರಿಗೆ ಈ ರೀತಿಯ ಮುಜುಗರದ ಪರಿಸ್ಥಿತಿ ಉಂಟಾಯಿತು ಎನ್ನಲಾಗಿದೆ.

      ಏಪ್ರಿಲ್ 7 ರಂದು ಅರ್ಸುಲಾ ಅವರು ಟರ್ಕಿಯ ಅಧ್ಯಕ್ಷರಾದ ತಯ್ಯಿಪ್ ಎರ್ಡಾಗನ್ ಅವರೊಂದಿಗೆ ಸಭೆ ನಡೆಸಲು ಇತರ ಉನ್ನತ ಅಧಿಕಾರಿಗಳೊಂದಿಗೆ ಅಂಕಾರಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಗೀವ್​ಹರ್​ಎಸೀಟ್​​ ಎಂಬ ಹ್ಯಾಷ್​​ಟ್ಯಾಗ್​ನೊಂದಿಗೆ ಜಾಲತಾಣದಲ್ಲಿ ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಹರಿದುಬಂದಿವೆ.

        ಟರ್ಕಿ ಅಧ್ಯಕ್ಷ ಎರ್​ಡಾಗನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಮೈಕೆಲ್ ಅವರೊಂದಿಗೆ ಕೊಠಡಿಯೊಳಕ್ಕೆ ಪ್ರವೇಶಿಸಿದ ಅರ್ಸುಲಾ ಅವರು ಎರಡೇ ಕುರ್ಚಿಗಳನ್ನು ಇರಿಸಿರುವುದನ್ನು ನೋಡಿ ನಿಲ್ಲುತ್ತಾರೆ. ಅಷ್ಟರಲ್ಲಿ ಆ ಇಬ್ಬರೂ ಪುರುಷ ಅಧ್ಯಕ್ಷರು ಎರಡು ಕುರ್ಚಿಗಳ ಮೇಲೆ ಕೂತುಬಿಡುವುದನ್ನು ನೋಡಿ ನಂಬಲಾರದೆ ಬೆರಗಾಗುತ್ತಾರೆ. ಈ ದೃಶ್ಯದ ತುಣುಕಿಗೆ ಅರ್ಸಲಾ 'ಎಹಮ್​ ?!' ಎಂದು ಉದ್ಗಾರ ಎತ್ತುವಂತೆ ಪ್ರತಿಕ್ರಿಯೆ ಸೇರಿಸಿ ಟ್ವಿಟರ್​​ನಲ್ಲಿ ಹರಿಬಿಡಲಾಗಿದೆ.

        ಇದಾದ ನಂತರ ಅರ್ಸುಲಾ ಅವರಿಗೆ ಮತ್ತು ಇನ್ನೊಬ್ಬ ಅಧಿಕಾರಿಗೆ ಹತ್ತಿರದಲ್ಲೇ ಇರುವ ಸೋಫಾಗಳ ಮೇಲೆ ಕೂರಲು ಅವಕಾಶ ನೀಡಲಾಗಿದೆ. ಆದಾಗ್ಯೂ ಈ ರೀತಿ ಮೂವರು ಅಧ್ಯಕ್ಷರು ಇರುವ ಸಮಯದಲ್ಲಿ ಟರ್ಕಿಯಲ್ಲಿ ಎರಡೇ ಕುರ್ಚಿ ಇಟ್ಟಿದ್ದರ ಬಗ್ಗೆ ಮತ್ತು ಮಹಿಳಾ ಅಧ್ಯಕ್ಷೆಯನ್ನು ನಿರ್ಲಕ್ಷಿಸಿ ಕುರ್ಚಿ ಆಕ್ರಮಿಸಿಕೊಂಡ ಅಧ್ಯಕ್ಷರಿಬ್ಬರ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries