ತಿರುವನಂತಪುರ: ರಾಜ್ಯದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಎಲ್ಲಾ ಪರೀಕ್ಷೆಗಳು ಮುಂದುವರಿಯಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ನಿನ್ನೆ ಮಧ್ಯಾಹ್ನ, ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿಬಿಎಸ್‍ಇ ಹತ್ತನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲು ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಯಿತು. ಇದೇ ವೇಳೆ ಐ.ಸಿ.ಎಸ್.ಇ ಮತ್ತು ಐ.ಎಸ್.ಇ ಪರೀಕ್ಷೆಗಳಿಗೆ ಸಂಬಂಧಿಸಿ ಏನು ಮಾಡಬಹುದೆಂಬುದು ಇನ್ನೂ ನಿರ್ಧರಿಸಲಾಗಿಲ್ಲ.
ಕೇರಳದಲ್ಲಿ ಸಿ.ಬಿ.ಎಸ್.ಇ ಹತ್ತನೇ ತರಗತಿಯಿಂದ ಪ್ಲಸ್ ವನ್ ತರಗತಿಗಳಿಗೆ ಸ್ಟೇಟ್ ಪಠ್ಯಕ್ರಮದಂತೆ ಸರಾಸರಿ 40 ಸಾವಿರದಿಂದ 45 ಸಾವಿರದಷ್ಟು ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಬಹುತೇಕರಿಗೆ ಪ್ಲಸ್ ವನ್ ಪ್ರವೇಶಾತಿಗೆ ಯಾವುದಾದರೂ ರೀತಿಯಲ್ಲಿ ಅಸಾಧ್ಯತೆ ಎದುರಾಗುವುದೇ ಎಂಬ ಬಗ್ಗೆ ಕಳವಳಗಳು ವ್ಯಕ್ತವಾಗಿದೆ.
ಹತ್ತನೇ ತರಗತಿ ಸಿಬಿಎಸ್ ಇ ಪರೀಕ್ಷೆ ರದ್ದುಗೊಳಿಸಲ್ಪಡುವುದು ಮತ್ತು ಸಿಬಿಎಸ್ ಇ ನಿರ್ಧಋಇಸುವ ಮಾನದಂಡಗಳಲ್ಲಿ ರ್ಯಾಂಕ್ / ಗ್ರೇಡ್ ನೀಡುವುದು, ಏಕ ರ್ಯಾಂಕಿಂಗ್ ರೀತಿಗೆ ಬದಲಾಯಿಸುವುದೋ ಮಾಡಿದಾಗ ಯಾವ ರೀತಿಯಲ್ಲಿ ಅಂಕಗಳನ್ನು ನಿರ್ಧರಿಸುತ್ತಾರೆ ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಅಂಕಗಳನ್ನು ಸ್ಥಿರ ಶ್ರೇಯಾಂಕ ವ್ಯವಸ್ಥೆಗೆ ಬದಲಾಯಿಸಿದಾಗ ಅವರು ಹೇಗೆಲ್ಲ ಅಂಕಕ್ರಮಗಳಲ್ಲಿ ಮೌಲ್ಯಮಾಪನಗೈಯ್ಯುವರೆಂಬುದು ವಿದ್ಯಾರ್ಥಿಗಳ ಹತಾಶೆಗೆ ಕಾರಣವಾಗಿದೆ.





