ಆಲಪ್ಪುಳ: ಎಲ್ಲಕ್ಕೂ ಅತೀತನಾಗಿ ನಾನಿರುವೆ ಎಂಬ ಭ್ರಮೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭಾವ ಇದ್ದಂತಿದೆ ಎಂದು ಬಿಜೆಪಿ ಮುಖಂಡ ಸಂದೀಪ್ ವಾಚಸ್ಪತಿ ಹೇಳಿದ್ದಾರೆ. ನಿಯಮಗಳು ಮತ್ತು ನಿಬಂಧsÀನೆಗಳ ಬಗ್ಗೆ ಯಾವುದೇ ಕಾಳಜಿ, ಜವಾಬ್ದಾರಿ ಇಲ್ಲದ ವ್ಯಕ್ತಿಯಾಗಿದ್ದು, ಇಂತವರು ಬೇರೊಬ್ಬ ಇರಲಾರರು ಎಂದು ಅವರು ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಪಿಣರಾಯಿ ವಿಜಯನ್ ಅವರು ಅಧಿಕಾರದಿಂದ ಕುರುಡಾಗಿರುವ ನಾಯಕ ಎಂದು ಪ್ರತಿದಿನ ಸಾಬೀತುಪಡಿಸುತ್ತಿದ್ದಾರೆ. ಪಿಣರಾಯಿಯು ಎಲ್ಲಕ್ಕಿಂತ ಮೇಲಿರುವೆ ಎಂಬ ಭರಮೆಯಲ್ಲಿ ಬಿಂಬಿಸಲ್ಪಡುತ್ತಿದ್ದಾರೆ ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಕೊರೋನಾ ಮಾನದಂಡಗಳನ್ನು ಪಾಲಿಸದೆ ಮತ ಚಲಾಯಿಸಲು ತೆರಳಿರುವುದೇ ಕಾರಣ ಎಂದು ತಿಳಿಸಿದರು.
ಯಾವುದೇ ಮಾನದಂಡಗಳನ್ನು ಅನುಸರಿಸದೆ ಮುಖ್ಯಮಂತ್ರಿ ಹೇಗೆ ಚುನಾವಣೆಗೆ ಹೋದರು? ರೋಗಲಕ್ಷಣಗಳು ಕಂಡುಬಂದಾಗ ಏಕೆ ಪರೀಕ್ಷಿಸಿಲ್ಲ ಅಥವಾ ಅಧೀಕ್ಷಕರು ಹೇಳುತ್ತಿರುವುದು ಸುಳ್ಳು ಎಂದಾದರೆ ಏಳನೇ ದಿನ ಸಿಎಂ ಅವರನ್ನು ಆಸ್ಪತ್ರೆಯಿಂದ ಏಕೆ ಬಿಡುಗಡೆ ಮಾಡಲಾಯಿತು? ಎಂದು ಎಂ. ಸಂದೀಪ್ ವಾಚಸ್ಪತಿ ಅವರು ಫೇಸ್‍ಬುಕ್ ಪೋಸ್ಟ್‍ನಲ್ಲಿ ಬರೆದಿದ್ದಾರೆ. ಈ ಹಿಂದೆ ಶಿವಶಂಕರನ್ ಹೇಳಿದ್ದನ್ನು ನಂಬಬೇಕಾಗುತ್ತದೆ ಎಂದು ಅವರು ಬೊಟ್ಟುಮಾಡಿರುವರು.





