HEALTH TIPS

ಕೋವಿಡ್ ಲಸಿಕೆ ಪಡೆದ ಬಳಿಕ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕೇವಲ ಶೇ.0.06: ಅಧ್ಯಯನ ವರದಿ

         ನವದೆಹಲಿ: ಕೋವಿಡ್-19 ಲಸಿಕೆಯನ್ನು ತೆಗೆದುಕೊಂಡ ಬಳಿಕ ಕೇವಲ ಶೇ.0.06 ಜನರು ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗುತ್ತದೆ ಮತ್ತು ಶೇ.97.38ರಷ್ಟು ಜನರು ವೈರಸ್ನಿಂದ ರಕ್ಷಣೆಯನ್ನು ಪಡೆಯುತ್ತಾರೆ ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯು ನಡೆಸಿದ ಅಧ್ಯಯನವೊಂದು ಬಹಿರಂಗಗೊಳಿಸಿದೆ. ಲಸಿಕೆ ಸ್ವೀಕರಿಸಿದ ಬಳಿಕ ಕೋವಿಡ್-19ರ ಆವರ್ತನಗಳ ಮೌಲ್ಯಮಾಪನ ನಡೆಸಲು ಈ ಅಧ್ಯಯನವನ್ನು ಕೈಗೊಳ್ಳಲಾಗಿತ್ತು.


         ಕೋವಿಶೀಲ್ಡ್ ಲಸಿಕೆಯನ್ನು ಬಳಸಿ ಲಸಿಕೆ ಅಭಿಯಾನದ ಮೊದಲ ನೂರು ದಿನಗಳಲ್ಲಿ ಕೋವಿಡ್-19 ಲಕ್ಷಣಗಳೊಂದಿಗೆ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು.

          ಈಗ ಜಾರಿಯಲ್ಲಿರುವ ಲಸಿಕೆ ಅಭಿಯಾನದ ನಡುವೆಯೇ ಎರಡನೇ ಅಲೆಯಿಂದಾಗಿ ಕೋವಿಡ್-19 ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿದೆ. ಲಸಿಕೆ ಪಡೆದುಕೊಂಡ ನಂತರವೂ ಸೋಂಕು ಕಾಣಿಸಿಕೊಂಡ ಪ್ರಕರಣಗಳು ವರದಿಯಾಗಿದ್ದು,'ಬ್ರೇಕ್‌ ತ್ರೂ ಇನ್ಫೆಕ್ಶನ್' ಎಂದು ಕರೆಯಲಾಗುವ ಈ ಸೋಂಕು ಭಾಗಶಃ ಲಸಿಕೆ ಪಡೆದವರಲ್ಲಿ ಮತ್ತು ಪೂರ್ಣ ಡೋಸ್ಗಳನ್ನು ತೆಗೆದುಕೊಂಡ ಕೆಲವರಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಪೋಲೊ ಹಾಸ್ಪಿಟಲ್ಸ್ ಗ್ರೂಪ್ನ ಸಮೂಹ ವೈದ್ಯಕೀಯ ನಿರ್ದೇಶಕ ಡಾ.ಅನುಪಮ್ ಸಿಬಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

       ಕೋವಿಡ್-19 ಲಸಿಕೆಯು ಶೇ.100ರಷ್ಟು ನಿರೋಧಕತೆಯನ್ನು ಒದಗಿಸುವುದಿಲ್ಲ ಎನ್ನುವುದನ್ನು ಅಧ್ಯಯನವು ತೋರಿಸಿದೆ. ಪೂರ್ಣ ಡೋಸ್ಗಳನ್ನು ತೆಗೆದುಕೊಂಡ ಬಳಿಕ ಅದು ಗಂಭೀರ ಲಕ್ಷಣಗಳ ವಿರುದ್ಧ ರಕ್ಷಣೆ ನೀಡುತ್ತದೆ. ಲಸಿಕೆ ಪಡೆದವರಲ್ಲಿ ಶೇ.97.38ರಷ್ಟು ಜನರು ಸೋಂಕಿನಿಂದ ರಕ್ಷಣೆ ಪಡೆದಿರುತ್ತಾರೆ ಮತ್ತು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕೇವಲ ಶೇ.0.06ರಷ್ಟಿರುತ್ತದೆ. ಕೆಲವೇ ಜನರಲ್ಲಿ ಬ್ರೆಕ್ಥ್ರೂ ಇನ್ಫೆಕ್ಶನ್ ಉಂಟಾಗುತ್ತದೆ ಮತ್ತು ಇವು ಪ್ರಾಥಮಿಕವಾಗಿ ಸೌಮ್ಯ ಸ್ವರೂಪದ ಸೋಂಕುಗಳಾಗಿದ್ದು, ಗಂಭೀರ ಕಾಯಿಲೆಯನ್ನುಂಟು ಮಾಡುವುದಿಲ್ಲ ಎನ್ನುವುದನ್ನು ಅಧ್ಯಯನದ ಫಲಿತಾಂಶಗಳು ತೋರಿಸಿವೆ. ಅಧ್ಯಯನಕ್ಕೊಳಗಾದವರಲ್ಲಿ ಯಾವುದೇ ಐಸಿಯು ದಾಖಲಾತಿ ಅಥವಾ ಸಾವುಗಳು ಉಂಟಾಗಿರಲಿಲ್ಲ. ಲಸಿಕೆ ನೀಡಿಕೆಯನ್ನು ಅಧ್ಯಯನವು ಬಲವಾಗಿ ಪ್ರತಿಪಾದಿಸಿದೆ ಎಂದರು.

              3,235 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಪೈಕಿ 85 ಜನರು ಅಧ್ಯಯನದ ಅವಧಿಯಲ್ಲಿ ಸೋಂಕಿಗೆ ಒಳಗಾಗಿದ್ದರು. ಇವರಲ್ಲಿ 65 ಜನರು ಲಸಿಕೆಯ ಎರಡೂ ಡೋಸ್ಗಳನ್ನು ಮತ್ತು 20 ಜನರು ಭಾಗಶಃ ಲಸಿಕೆಯನ್ನು ಪಡೆದಿದ್ದರು. ಮಹಿಳೆಯರ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮಗಳಾಗಿದ್ದವು ಮತ್ತು ಸೋಂಕಿನ ಮೇಲೆ ವಯಸ್ಸಿನ ಯಾವುದೇ ಪ್ರಭಾವವಿರಲಿಲ್ಲ ಎಂದು ಡಾ.ಸಿಬಲ್ ವಿವರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries