ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಅಧಿಕಗೊಳ್ಳುತ್ತಿದ್ದರೂ, ಕೆಲವೆಡೆ ಮಾಸ್ಕ್ ಧರಿಸುವಲ್ಲಿ ಜನರು ಅಸಡ್ಡೆ ತೋರುತ್ತಿರುವುದು ದೊಡ್ಡ ಸಮಸ್ಯೆಯಾಗುತ್ತಿದೆ. ಕೋವಿಡ್ ಸಂಹಿತೆಯ ಉಲ್ಲಂಘನೆಯಾಗಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ವ್ಯವಹರಿಸುತ್ತಿರುವುದು ಮುಂದುವರಿಯುತ್ತಿರುವುದು ಪೋಲೀಸರು ದಖಲಿಸುವ ಕೇಸಿನಿಂದ ಸ್ಪಷ್ಟಗೊಳ್ಳುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ್ ಇಲ್ಲದೇ ಅಡ್ಡಾಡುತ್ತಿದ್ದ ಸಹಿತ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಈ ವರೆಗೆ ಒಟ್ಟು 110117 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿ, ದಂಡ ವಸೂಲಿ ಮಾಡಿದ್ದಾರೆ. ಕೋವಿಡ್ ಕಟ್ಟುನಿಟ್ಟು ಉಲ್ಲಂಘಿಸಿದ ಸಂಬಂದ 12215 ಮಂದಿ ವಿರುದ್ಧ, ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಪ್ರತಿದಿನ ಸರಾಸರಿ 500 ಮಂದಿ ವಿರುದ್ಧ ಕೇಸು ದಾಖಲಾಗುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಆದವರ ಸಂಖ್ಯೆ 50 ಸಾವಿರ ಮೀರುತ್ತಿದೆ. ಪ್ರದಿನ ವರದಿಯಲ್ಲಿ ಕೋವಿಡ್ ಪಾಸಿಟಿವ್ ಆದವರ ಸಂಖ್ಯೆ ಒಂದು ಸಾವಿರಕ್ಕೂ ಅಧಿಕವಾಗಿದೆ. ಬೃಹತ್ ಮುಗ್ಗಟ್ಟು ತಲೆದೋರಿದ್ದರೂ, ಕೆಲವೆಡೆ ಜನ ಜಾಗರೂಕತೆ ಪಾಲಿಸದೇ ಇರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಮತಗಣನೆ ದಿನವಾಗಿದ್ದ ಮೇ 2ರಂದು 895 ಮಂದಿ ವಿರುದ್ಧ ಈ ಆರೋಪದಲ್ಲಿ ಪೆÇಲೀಸರು ಕೇಸು ದಾಖಲಿಸಿದ್ದರು. ಮೇ 3ರಂದು 276 ಮಂದಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ದಾಖಲಾದ ಕೇಸುಗಳ ವಿವರ ಈ ರೀತಿ ಇದೆ:
ದಿನ-ಮಾಸ್ಕ್ ಧರಿಸದೇ ಇದ್ದದ್ದಕ್ಕೆ ಕೇಸು-ಕೋವಿಡ್ ಸಂಹಿತೆ ಉಲ್ಲಂಘನೆ ಕೇಸು ಎಂಬ ಕ್ರಮದಲ್ಲಿ -
ಏ.1-399-5
ಏ.2-120-3
ಏ.3-99,7
ಏ.4-98-3
ಏ.7-43-4
ಏ.8-213-6.
ಏ.9-93,8
ಏ.10-297-16
ಏ.11-292-10
ಏ.12-274-99
ಏ.13-274-9
ಏ.14-225-8
ಏ.17-1127-16
ಏ.18-734-14
ಏ.19-1036-13
ಏ.20-1284-2
ಏ.21-1219-2
ಏ.22-657-2
ಏ.23-840-11
ಏ.24-592-3
ಏ.25-513-24
ಏ.26-1230-14
ಏ.27-927-15
ಏ.28-100-14
ಏ.29-946-10
ಏ.30-30-7.





