ತಿರುವನಂತಪುರ: ಕೊರೋನಾ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ರಾಜ್ಯದಲ್ಲಿ ಗಮನಾರ್ಹ ಬದಲಾವಣೆಗಳೇನೂ ಕಂಡುಬಂದಂತಿಲ್ಲವೆಂದೇ ವಿಶ್ಲೇಷಿಸಲಾಗಿದೆ. ಲಾಕ್‌ಡೌನ್ ಪ್ರಾರಂಭವಾಗಿ ಹದಿನೇಳು ದಿನಗಳು ಸಂದಿದ್ದು, ರೋಗಿಗಳ ಸಂಖ್ಯೆ ಸ್ವಲ್ಪ ಇಳಿಮುಖದಲ್ಲಿದೆ.ಆದರೆ ಹೆಚ್ಚುತ್ತಿರುವ ಮರಣ ಪ್ರಮಾಣವು ನಿಯಂತ್ರಣ ಕ್ರಮಗಳಿಗೆ ಸವಾಲನ್ನು ಒಡ್ಡುತ್ತಿವೆ.
ಕೇರಳದಲ್ಲಿ ಕೊರೋನದ ಎರಡನೇ ಅಲೆಯ ಉತ್ತುಂಗದಲ್ಲಿ ರಾಜ್ಯ ಮುಂದುವರಿದಿದೆ. ರೋಗಿಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ, ಯಾವುದೇ ಪರಿಣಾಮ ಕಂಡುಬಂದಿಲ್ಲ. ನಿನ್ನರ 1,43,028 ಮಾದರಿಗಳನ್ನು ಪರೀಕ್ಷಿಸಿದಾಗ, 29,803 ಸೋಂಕಿತರನ್ನು ಪತ್ತೆಹಚ್ಚಲಾಗಿದೆ. ಸಂಪರ್ಕದೊಂದ ಸೋಂಕುಬಾಧಿತರಾಗುವವರಲ್ಲೂ ಕುಸಿತ ಕಂಡುಬಂದಿಲ್ಲ. ಪರೀಕ್ಷಾ ಸಕಾರಾತ್ಮಕತೆ ದರ ಕಡಿಮೆಯಿದ್ದರೂ, ಮರಣ ಪ್ರಮಾಣ ಕಡಿಮೆಯಾಗಿಲ್ಲ.
ದಿನಕ್ಕೆ ಸುಮಾರು 200 ರ ವರೆಗಿನ ಸಾವುಗಳು ಸಂಭವಿಸುತ್ತಿದ್ದು, ರಾಜ್ಯದ ಕೋವಿಡ್ ಅಂಕಿಅಂಶಗಳು ಕಳವಳಕಾರಿಯಾಗಿಯೇ ಮುಂದುವರಿದಿದೆ. ಲಾಕ್‌ಡೌನ್ ಪ್ರಾರಂಭವಾಗಿ 18 ದಿನಗಳಾದರೂ ರೋಗಿಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿಲ್ಲ ಎಂಬುದು ವಾಸ್ತವ. ದೈನಂದಿನ ಸೋಂಕುಬಾಧಿತರು ಮತ್ತು ಮರಣ ಪ್ರಮಾಣ ಕಡಿಮೆಯಾದರೆ ಮಾತ್ರ ರಾಜ್ಯದಲ್ಲಿ ನಿಯಂತ್ರಣ ಸಾಧ್ಯವಾಗಿದೆ ಎಂದು ತಿಳಿಯಬಹುದು. ದೈನಂದಿನ ಮರಣ ಪ್ರಮಾಣವು ರೋಗನಿಯಂತ್ರಣ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ತರ್ಕಿಸಿದ್ದಾರೆ.


