HEALTH TIPS

ಕೋವಿಡ್-19 ಲಸಿಕೆಗಳ ವ್ಯರ್ಥ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರಲಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

                 ನವದೆಹಲಿದೇಶದಲ್ಲಿ ಕೋವಿಡ್ ಲಸಿಕೆಗಳಿಗೆ ವ್ಯಾಪಕ ಅಭಾವ ಉಂಟಾಗಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಲಸಿಕೆಗಳ ವ್ಯರ್ಥದ ಮೇಲೆ ಸಂಪೂರ್ಣ ನಿಯಂತ್ರಣ ಹೇರುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.


      States have been urged repeatedly to keep vaccine wastage below 1%, many States like Jharkhand (37.3%), Chhattisgarh (30.2%), Tamil Nadu (15.5%), Jammu & Kashmir (10.8%), Madhya Pradesh (10.7%) are reporting much higher wastage than the national average (6.3%): Ministry of Health

            ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆ ದೇಶದ ಹಲವು ರಾಜ್ಯಗಳಲ್ಲಿ ಲಸಿಕೆ ವ್ಯರ್ಥದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಲಸಿಕೆಗಳಿಗೆ ಅಭಾವ ಇರುವ ಈ ಹೊತ್ತಿನಲ್ಲಿ ಇಂತಹ ನಡೆ ದುಬಾರಿಯಾಗಿ ಪರಿಣಮಿಸುತ್ತಿದೆ. ಜಾರ್ಖಂಡ್, ತಮಿಳುನಾಡು, ಛತ್ತೀಸ್ ಘಡ ಸೇರಿದಂತೆ ಸಾಕಷ್ಟು ರಾಜ್ಯಗಳಲ್ಲಿ ಲಸಿಕೆ ವ್ಯರ್ಥ ಪ್ರಮಾಣ ಹೆಚ್ಚಿದೆ. ಪ್ರಮುಖವಾಗಿ ಜಾರ್ಖಂಡ್ (37.3%), ಛತ್ತೀಸ್‌ಗಢ (30.2%), ತಮಿಳುನಾಡು (15.5%), ಜಮ್ಮು ಮತ್ತು ಕಾಶ್ಮೀರ (10.8%), ಮಧ್ಯಪ್ರದೇಶ (10.7%) ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಲಸಿಕೆ ವ್ಯರ್ಥ ಪ್ರಮಾಣ ರಾಷ್ಟ್ರೀಯ ಸರಾಸರಿ (6.3%) ಗಿಂತ ಹೆಚ್ಚಿದೆ. ಹೀಗಾಗಿ ಲಸಿಕೆ ವ್ಯರ್ಥ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವಂತೆ ರಾಜ್ಯಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries