ಕೊಟ್ಟಾಯಂ: ಕೇರಳ ಕಾಂಗ್ರೆಸ್-ಎಂ ಅಧ್ಯಕ್ಷ ಜೋಸ್ ಕೆ ಮಣಿ ಸ್ಪರ್ಧಿಸಿದ ಪಾಲಾದಲ್ಲಿ ಮಾತ್ರ ಬಿಜೆಪಿ 20,000 ಕ್ಕೂ ಹೆಚ್ಚು ಮತಗಳನ್ನು ಕಳೆದುಕೊಂಡಿದೆ. ಪಾಲಾ ಕ್ಷೇತ್ರದಲ್ಲಿ, ಒಂದು ಪಂಚಾಯತ್ ನಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮತ್ತು ಎರಡು ಪಂಚಾಯಿತಿಗಳಲ್ಲಿ ಪ್ರತಿಪಕ್ಷವಾಗಿ ಮುನ್ನಡೆಯುತ್ತಿರುವ ಬಿಜೆಪಿ, ಪಾಲಾದಲ್ಲಿ 30,000 ಮತಗಳನ್ನು ಹೊಂದಿದೆ. ಆದರೆ ಭಾನುವಾರ ಪಾಲಾದಲ್ಲಿ ಫಲಿತಾಂಶಗಳು ಬಹಿರಂಗಗೊಂಡಾಗ ಪಕ್ಷದ ರಾಜ್ಯ ಉಪಾಧ್ಯಕ್ಷೆ ಡಾ. ಪ್ರಮೀಳಾ ದೇವಿ ಕೇವಲ 10869 ಮತಗಳನ್ನು ಪಡೆದರು.
ಪಾಲಾದಲ್ಲಿ ಬಿಜೆಪಿ ಪ್ರಬಲವಾಗಿ ಬೇರುಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಮುತೋಲಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ರಾಮಪುರಂ, ಮೀನಾಚಿಲ್ ಮತ್ತು ಕೊಳಿವನಾಲ್ ನಲ್ಲಿ ಬಿಜೆಪಿ ನಿರ್ಣಾಯಕ ಶಕ್ತಿಯಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಾಲಾದಲ್ಲಿ ಬಿಜೆಪಿಗೆ 26,800 ಮತಗಳು ಲಭ್ಯವಾಗಿದ್ದವು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೆಎಂ ಮಣಿ ವಿರುದ್ಧ ಬಿಜೆಪಿಗೆ 24,800 ಮತಗಳು ಲಭಿಸಿದ್ದವು. ಬಿಜೆಪಿ ರಾಜ್ಯ ಘಟಕ, ಜಿಲ್ಲಾ ಮತ್ತು ಪ್ರಾದೇಶಿಕ ಘಟಕಗಳ ಪ್ರಕಾರ ಪಾಲಾದಲ್ಲಿ ಬಿಜೆಪಿ ಉತ್ತಮ ಪ್ರಗತಿಯಲ್ಲಿದೆ.
ಕಳೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ, ಇತಿಹಾಸದಲ್ಲಿ ಮೊದಲ ಬಾರಿಗೆ, ಪಾಲಾದಲ್ಲಿನ ಒಂದು ಪಂಚಾಯಿತಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಪಾಲಾದಲ್ಲಿ ಬಿಜೆಪಿಗೆ 30,000 ಕ್ಕೂ ಹೆಚ್ಚು ಮತಗಳಿವೆ ಎಂದದು ದೃಢಪಡಿಸಿದೆ. ಆದರೂ ಪ್ರಮೀಳಾ ದೇವಿಗೆ ವಿಧಾನಸಭಾ ಚುನಾವಣೆಯಲ್ಲಿ 20,000 ಕ್ಕೂ ಹೆಚ್ಚು ಮತಗಳು ಲಭ್ಯವಾಗದೆ ಹೇಗೆ ಸೋರಿಕೆಯಾಯಿತು ಎಂಬ ಪ್ರಶ್ನೆಗೆ ಪಕ್ಷ ಉತ್ತರಿಸಬೇಕಾಗುತ್ತದೆ.
ಈ ಬಾರಿ ಬಿಜೆಪಿ ಮತ ಸೋರಿಕೆಗೆ ಮೀನಾಚಿಲ್ ಪಂಚಾಯತಿ ಕಾರಣ ಎನ್ನಲಾಗಿದೆ. ಕಳೆದ ಬಾರಿ ಮೀನಾಚಿಲ್ ಪಂಚಾಯತಿಯಲ್ಲಿ ಬಿಜೆಪಿ ಎರಡನೇ ದೊಡ್ಡ ವಿರೋಧ ಪಕ್ಷವಾಗಿತ್ತು. ಈ ಬಾರಿ ಪ್ರಮಿಳಾ ದೇವಿ ಆ ಪಂಚಾಯತಿ ವ್ಯಾಪ್ತಿಯಲ್ಲಿ ಕೇವಲ 776 ಮತಗಳನ್ನು ಮಾತ್ರ ಪಡೆದರು. ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಮಿನಾಚಿಲ್‍ನಲ್ಲಿ ಬಿಜೆಪಿ 2703 ಮತಗಳಿತ್ತು. ಯುಡಿಎಫ್ ಪಡೆದದ್ದು ಕೇವಲ 2690 ಮತಗಳನ್ನು. ಆಡಳಿತಾರೂಢ ಎಲ್ಡಿಎಫ್ 4764 ಮತಗಳನ್ನು ಪಡೆದಿತ್ತು.
6 ತಿಂಗಳ ಹಿಂದೆ ಬಿಜೆಪಿಗೆ 2703 ಮತಗಳು ದೊರೆತಿರುವಾಗ(ಸ್ಥಳೀಯಾಡಳಿತ ಚುನಾವಣೆ) ಈ ಬಾರಿ ಕೇವಲ 776 ಮತಗಳು ಮಾತ್ರ ಲಭ್ಯವಾಗಿದ್ದು, ಉಳಿದ 1927 ಮತಗಳು ಎಲ್ಲಿಗೆ ಹೋದವು ಎಂಬುದು ಪ್ರಶ್ನೆಯಾಗಿದೆ.
ಬಿಜೆಪಿಗೆ ಸಂಬಂಧಿಸಿದಂತೆ, ವಿರೋಧವಿರುವುದು ಜೋಸ್ ಕೆ.ಮಣಿ ವಿರುದ್ಧ ಅಲ್ಲ. ಪಿಣರಾಯಿ ವಿಜಯನ್ ವಿರುದ್ಧವಾಗಿತ್ತು. ರಾಜಕೀಯ ಚಿಂತನೆಗಳ ಪ್ರಕಾರ, ಯುಡಿಎಫ್ ತೊರೆದು ಎಲ್‍ಡಿಎಫ್‍ಗೆ ಸೇರ್ಪಡೆಯಾದ ಜೋಸ್ ಕೆ. ಮಣಿಯನ್ನು ಸೋಲಿಸಲು ಬಿಜೆಪಿ ಕಾರ್ಯಕರ್ತರು ಬಯಸಿದ್ದರು. ಮಹಿಳೆಯರ ಶಬರಿಮಲೆ ಪ್ರವೇಶ ವಿವಾದಕ್ಕೆ ಕಾರಣರಾದ ಪಿಣರಾಯಿಗೆ ಜೋಸ್ ಕೆ ಮಣಿ ಬೆಂಬಲವಾಗಿದ್ದುದು ಮತದಾರರ ಕೋಪಕ್ಕೆ ಕಾರಣ ಎಂದು ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.





