ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ ಜನರ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿರುವರು. ವಿಧಾನಸಭಾ ಚುನಾವಣೆಯಲ್ಲಿ ಇದ್ದ ಒಂದೇ ಒಂದು ಸ್ಥಾನವನ್ನು ಕಳೆದುಕೊಂಡರೂ ಜನರ ಪ್ರತಿನಿಧಿಯಾಗಿ ಪಕ್ಷವು ಮುಂದುವರಿಯುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿನ ಮುಸ್ಲಿಂ ಮತದಾರರ ಧ್ರುವೀಕರಣ ನಡೆದಿದ್ದು, "ಇದು ನಮ್ಮ ಗಮನಕ್ಕೆ ಬಂದಿದೆ" ಎಂದು ಸುರೇಂದ್ರನ್ ತಿಳಿಸಿರುವರು.
ಎನ್.ಡಿ.ಎ ನಿರೀಕ್ಷಿತ ಸ್ಥಾನಗಳಲ್ಲಿ ಪರಾಜಯಗೊಂಡಿರುವುದನ್ನು ಸಮಗ್ರವಾಗಿ ಚಿಂತನೆ ನಡೆಸಲಾಗುವುದು. ಗೆಲುವಿನ ಅವಕಾಶವಿರುವ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಧ್ರುವೀಕರಣವು ಅಧಿಕಾರ ವ್ಯಾಮೋಹದ ಹಿನ್ನೆಲೆಯಲ್ಲಿ ನಡೆದಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಎನ್.ಡಿ.ಎ ಮೈತ್ರಿಕೂಟದ ಕಾರ್ಯಕ್ಷಮತೆಯ ಬಗ್ಗೆ ವಿವರವಾದ ಚರ್ಚೆಗಳು ಇನ್ನಷ್ಟು ಬಲಯುತಗೊಳ್ಳುವುದು ಎಂದವರು ಸೂಚನೆ ನೀಡಿದರು.
ಮಂಜೇಶ್ವರದಲ್ಲಿ ಹಿಂದೆಂದಿಗಿಂತಲೂ ಸಾವಿರಾರು ಮತಗಳು ಪಕ್ಷಕ್ಕೆ ಹೆಚ್ಚು ಲಭಿಸಿದೆ. ಆದರೂ ಏಳುನೂರು ಮತಗಳ ಅಂತರದಿಂದ ಪರಾಭವಗೊಳ್ಳಬೇಕಾಯಿತು. ಪಾಲಕ್ಕಾಡ್ ನಲ್ಲಿ ಮುಸ್ಲಿಂ ಮತದಾರರು ಇ.ಶ್ರೀಧರನ್ ಅವರನ್ನು ಪರಾಭವಗೊಳಿಸಿದರು ಎಂದು ಆರೋಪಿಸಿದರು.





