HEALTH TIPS

ತೀವ್ರಗೊಂಡ ಕೋವಿಡ್: ಸಾವಿನ ಸಂಖ್ಯೆಯಲ್ಲೂ ಏರಿಕೆ: ಇಂದು 43,529 ಮಂದಿಗೆ ಸೋಂಕು: 34,600 ಮಂದಿ ಗುಣಮುಖ; ಪರೀಕ್ಷಾ ಸಕಾರಾತ್ಮಕತೆ ದರ ಶೇ.29.75

                 ತಿರುವನಂತಪುರ: ಕೇರಳದಲ್ಲಿ ಇಂದು 43,529 ಮಂದಿ ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಎರ್ನಾಕುಳಂ 6410, ಮಲಪ್ಪುರಂ 5388, ಕೋಝಿಕೋಡ್ 4418, ತಿರುವನಂತಪುರ 4284, ತ್ರಿಶೂರ್ 3994, ಪಾಲಕ್ಕಾಡ್ 3520, ಕೊಲ್ಲಂ 3350, ಕೊಟ್ಟಾಯಂ 2904, ಆಲಪ್ಪುಳ 2601, ಕಣ್ಣೂರು 2346, ಪತ್ತನಂತಿಟ್ಟು 1339, ಇಡುಕ್ಕಿ 1305, ಕಾಸರಗೋಡು 969, ವಯನಾಡ್ 701 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 


             ಕಳೆದ 24 ಗಂಟೆಗಳಲ್ಲಿ 1,46,320 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.29.75 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,74,18,696 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

            ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಬಂದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (115), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಈವರೆಗೆ ಒಟ್ಟು 125 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಪೈಕಿ 123 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಮಂದಿ ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

        ಕಳೆದ 24 ಗಂಟೆಗಳಲ್ಲಿ  95 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 6053 ಕ್ಕೆ ಏರಿಕೆಯಾಗಿದೆ. 

     ಸೋಂಕಿನಿಂದ ಬಳಲುತ್ತಿರುವವರಲ್ಲಿ 241 ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 40,133 ಮಂದಿ ಜನರಿಗೆ ಸೋಂಕು ತಗುಲಿತು. 3010 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 6247, ಮಲಪ್ಪುರಂ 5185, ಕೋಝಿಕ್ಕೋಡ್ 4341, ತಿರುವನಂತಪುರ 3964, ತ್ರಿಶೂರ್ 3962, ಪಾಲಕ್ಕಾಡ್ 1428, ಕೊಲ್ಲಂ 3336, ಕೊಟ್ಟಾಯಂ 2744, ಆಲಪ್ಪುಳ 2596, ಕಣ್ಣೂರು 2151, ಪತ್ತನಂತಿಟ್ಟು 1285, ಇಡುಕ್ಕಿ 1277,ಕಾಸರಗೋಡು 943, ವಯನಾಡ್ 674 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.

            ಇಂದು ಒಟ್ಟು 145 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. ಕಣ್ಣೂರು 33, ತ್ರಿಶೂರ್ 23, ಎರ್ನಾಕುಳಂ 15, ಪಾಲಕ್ಕಾಡ್, ಕಾಸರಗೋಡು ತಲಾ 11, ತಿರುವನಂತಪುರ, ಪತ್ತನಂತಿಟ್ಟು, ಕೋಝಿಕೋಡ್, ವಯನಾಡ್ ತಲಾ 10, ಕೊಲ್ಲಂ 8, ಕೊಟ್ಟಾಯಂ 2, ಆಲಪ್ಪುಳ ಮತ್ತು ಇಡುಕಿ ತಲಾ 1 ಎಂಬಂತೆ  ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.

            ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 34,600 ಮಂದಿ ಜನರಿಗೆ ಸೋಂಕು ಗುಣಮುಖವಾಗಿದೆ. ತಿರುವನಂತಪುರ 2338, ಕೊಲ್ಲಂ 2815, ಪತ್ತನಂತಿಟ್ಟು 1264, ಆಲಪ್ಪುಳ 2518, ಕೊಟ್ಟಾಯಂ 2171, ಇಡುಕಿ 1287, ಎರ್ನಾಕುಳಂ 4474, ತ್ರಿಶೂರ್ 2319, ಪಾಲಕ್ಕಾಡ್ 3100, ಮಲಪ್ಪುರಂ 3946, ಕೊಝಿಕೋಡ್ 5540, ವಯನಾಡ್ 446, ಕಣ್ಣೂರು 1907, ಕಾಸರಗೋಡು 475 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ, 4,32,789 ಮಂದಿ ಜನರಿಗೆ ಸೋಂಕು ಈವರೆಗೆ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 15,71,738 ಮಂದಿ ಜನರು ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

          ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 10,01,647 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 9,67,211 ಮಂದಿ ಜನರು ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 34,436 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 3593 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

               ಇಂದು 5 ಹೊಸ ಹಾಟ್‍ಸ್ಪಾಟ್‍ಗಳಿವೆ. 75 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 740 ಹಾಟ್‍ಸ್ಪಾಟ್‍ಗಳಿವೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries