ನವದೆಹಲಿ: ದೇಶದ 5 ಸ್ಥಳಗಳಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಪ್ರಯೋಗ ನಡೆಯಲಿದೆ.
ದೇಶದ ಐದು ವೈದ್ಯಕೀಯ ಸಂಸ್ಥೆಗಳಲ್ಲಿ 2 ರಿಂದ 18 ವರ್ಷ ವಯಸ್ಸಿನವರ ಮೇಲೆ ಪ್ರಯೋಗ ನಡೆಯಲಿದೆ. ಈ ಪ್ರಯೋಗದಲ್ಲಿ 525 ಮಕ್ಕಳು ಭಾಗಿಯಾಗಲಿದ್ದಾರೆ.
ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಅಮೆರಿಕದಲ್ಲಿ ಫೈಜರ್ ಕಂಪನಿಯು ಲಸಿಕೆ ಪ್ರಯೋಗದಲ್ಲಿ 12-15 ವರ್ಷದೊಳಗಿನ 2260 ಮಕ್ಕಳ ಮೇಲೆ ಪ್ರಯೋಗ ನಡೆಸಿತ್ತು. ಒಟ್ಟು 6750 ಮಂದಿ ಮಕ್ಕಳು ಪ್ರಯೋಗದ ಭಾಗವಾಗಿದ್ದರು.
ಕಾನ್ಪುರ್ ಪ್ರಖರ್ ಆಸ್ಪತ್ರೆ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮಡಿಕಲ್ ಸೈನ್ಸಸ್, ಪಾಟ್ನಾ, ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್, ಪ್ರಣಾಮ್ ಆಸ್ಪತ್ರೆ ಹೈದರಾಬಾದ್, ಮೆಡಿಟ್ರಿನಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಾಗ್ಪುರದಲ್ಲಿ ಪ್ರಯೋಗ ನಡೆಯಲಿದೆ.
3 ವರ್ಗದ ಮಕ್ಕಳ ಮೇಲೆ ಈ ಲಸಿಕೆ ಪ್ರಯೋಗ ಮಾಡಲಾಗುತ್ತಿದ್ದು, ಮೊದಲ ಹಂತ 12ರಿಂದ 18 ವರ್ಷದ ಮಕ್ಕಳು, 2ನೇ ಹಂತದಲ್ಲಿ 6ರಿಂದ 12 ವರ್ಷದ ಮಕ್ಕಳು ಹಾಗೂ 3ನೇ ವರ್ಗ 2ರಿಂದ 6 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲು ಬೇಕಾದ ತಂತ್ರಜ್ಞಾನ ಹಾಗೂ ಲ್ಯಾಬ್ ಸಿದ್ಧಪಡಿಸಲಾಗುತ್ತಿದೆ.





