ತಿರುವನಂತಪುರ: ಈ ವರ್ಷದ ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಜೂನ್ 7 ರಿಂದ ಪ್ರಾರಂಭವಾಗಲಿದೆ. ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಅಸೆಸ್ಮೆಂಟ್ ಜೂನ್ 1 ರಿಂದ ಪ್ರಾರಂಭವಾಗಲಿದೆ.
ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಜೂನ್ 7 ರಿಂದ 25 ರವರೆಗೆ ನಡೆಯಲಿದೆ. ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಅಸೆಸ್ಮೆಂಟ್ ಅನ್ನು ಜೂನ್ 19 ರವರೆಗೆ ನಡೆಸಲಾಗುವುದು. ಮೌಲ್ಯಮಾಪನಕ್ಕೆ ತೆರಳಲಿರುವ ಶಿಕ್ಷಕರಿಗೆ ಲಸಿಕೆ ನೀಡಲಾಗುವುದು. ಮೌಲ್ಯಮಾಪನದ ಮೊದಲು ಅದು ಪೂರ್ಣಗೊಳ್ಳುತ್ತದೆ. ಆರೋಗ್ಯ ಇಲಾಖೆಯು ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚಿಸಿ ವಿತರಣೆಗೆ ಕ್ರಮ ಕೈಗೊಳ್ಳಲಿದೆ.






