HEALTH TIPS

ಮಧ್ಯಮ ಪ್ರಮಾಣದ ಕೋವಿಡ್ ಸೋಂಕು ಲಕ್ಷಣ ಇರುವವರಿಗೆ 'ವಿರಾಫಿನ್' ನೀಡಲು ಡಿಸಿಜಿಐ ಅನುಮೋದನೆ

             ನವದೆಹಲಿ: ಮಧ್ಯಮ ಪ್ರಮಾಣದ ಸೋಂಕು ಲಕ್ಷಣ ಇರುವ ಕೋವಿಡ್ ಸೋಂಕಿತರಿಗೆ 'ವಿರಾಫಿನ್' ಔಷಧಿ ನೀಡಲು ದೇಶದ ಅತ್ಯುನ್ನತ ಔಷಧ ನಿಯಂತ್ರಕವಾದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದ ಬೆನ್ನಲ್ಲೇ ವಿರಾಫಿನ್ ಔಷಧಇ ತಯಾರಿಕಾ ಸಂಸ್ಥೆ ಝೈಡಸ್ ಕ್ಯಾಡಿಲಾ ದರ ಘೋಷಣೆ ಮಾಡಿದೆ.


          ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕಳೆದ ಏಪ್ರಿಲ್ 23 ರಂದು ಕೋವಿಡ್-19 ಔಷಧಿಯಾಗಿ ಝೈಡಸ್ ಕ್ಯಾಡಿಲಾ ತಯಾರಿಸಿರುವ 'ವಿರಾಫಿನ್' ಎಂಬ ಏಕ-ಬಳಕೆಯ ಔಷಧಕ್ಕೆ ಅನುಮೋದನೆ ನೀಡಿತ್ತು. ಇದೀಗ ಝೈಡಸ್ ಕ್ಯಾಡಿಲಾ ಈ ವಿರಾಫಿನ್ ಔಷಧಿ ದರ ನಿಗದಿ ಮಾಡಿದ್ದು, ಪ್ರತಿ ಡೋಸ್ ಗೆ 11,995 ರೂ. ನಿಗದಿಪಡಿಸಿದೆ.

          ಝೈಡಸ್ ಕ್ಯಾಡಿಲಾ ಔಷಧಿಯನ್ನು ತಾಂತ್ರಿಕವಾಗಿ ಪೆಜಿಲೇಟೆಡ್ ಇಂಟರ್ಫೆರಾನ್ ಆಲ್ಫಾ-2 ಬಿ ಎಂದು ಕರೆಯುತ್ತಾರೆ, ಮಧ್ಯಮ ಪ್ರಮಾಣದ ಸೋಂಕು ಇದ್ದಾಗ ಈ ಔಷಧಿಯನ್ನು ನೀಡಬಹುದು ಎಂದು ತಜ್ಞರು ಹೇಳಿದ್ದಾರೆ. ವೈರಸ್ ತೀವ್ರತೆ ಮಧ್ಯಮ ಮತ್ತು ತೀವ್ರ ಪ್ರಮಾಣದ ನಡುವೆ ಇದ್ದಾಗ, ಆಮ್ಲಜನಕದ ಅಗತ್ಯವು ತ್ವರಿತವಾಗಿರುತ್ತದೆ. ಆದ್ದರಿಂದ ಈ ಔಷಧಿಯನ್ನು ನೀಡುವ ಮೂಲಕ ವೈರಸ್ ತೀವ್ರತೆಯ ಪರಿಣಾಮ ಕಡಿಮೆಯಾಗುತ್ತದೆ ಮತ್ತು ಆಮ್ಲಜನಕದ ಅಗತ್ಯವೂ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

         ಕೋವಿಡ್ ರೋಗಿಗಳಲ್ಲಿ ಅತ್ಯಂತ ಪರಿಣಾಮಕಾರಿ ವಿರಾಫಿನ್: ಝೈಡಸ್ ಕ್ಯಾಡಿಲಾ ಈ ಕುರಿತು ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರತಿಕ್ರಿಯಿಸಿದ್ದು, 'ನಾವು ಚಿಕಿತ್ಸೆಯನ್ನು ನೀಡಲು ಸಮರ್ಥರಾಗಿದ್ದೇವೆ. ಇದು ಉತ್ತಮ ರೋಗ ನಿರ್ವಹಣೆಗೆ ಸಹಾಯ ಮಾಡುತ್ತದೆ. ರೋಗಿಯ ಸ್ಥಿತಿ ಅತ್ಯಂತ ಚಿಂತಾಜನಕ ಆಗಿದ್ದಾಗ ಈ ಔಷಧಿ ಉಪಯೋಗಕ್ಕೆ ಬರುತ್ತದೆ ಮತ್ತು ಕೋವಿಡ್-19 ವಿರುದ್ಧದ ಈ ಯುದ್ಧದಲ್ಲಿ ರೋಗಿಗಳಿಗೆ ಶಕ್ತಿಯಾಗಿ ಈ ಔಷಧಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ ತಮ್ಮ ಪೆಗ್ ಐಎಫ್‌ಎನ್‌ನೊಂದಿಗೆ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಶೇ.91 ರಷ್ಟು ರೋಗಿಗಳು 7ನೇ ದಿನದ ವೇಳೆಗೆ ಆರ್‌ಟಿ-ಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ರಿಪೋರ್ಟ್ ಪಡೆದಿದ್ದಾರೆ. ಮೂರು ಹಂತಗಳಲ್ಲಿ ಈ ಔಷಧಿ ಪರೀಕ್ಷೆಗೊಳಪಟ್ಟಿದ್ದು, ಈ ಔಷಧಿಯ ಮೊದಲನೇ ಡೋಸ್ ಪಡೆದ ರೋಗಿಗಳು ಏಳು ದಿನಗಳಲ್ಲಿ ಗುಣಮುಖರಾಗಿದ್ದಾರೆ. ವೈರಸ್ ವಿರುದ್ಧದ ಹೋರಾಟದಲ್ಲಿ ಈ ಔಷಧಿ ಬಹಳ ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಕಾರಣಕ್ಕಾಗಿ ಇದಕ್ಕೆ ಡಿಸಿಜಿಐ ತ್ವರಿತವಾಗಿ ಅನುಮೋದನೆ ನೀಡಿದೆ ಎಂದು ಝೈಡಸ್ ಕ್ಯಾಡಿಲಾ ಹೇಳಿಕೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries