HEALTH TIPS

​ವಿಶ್ವದ 44 ದೇಶಗಳಲ್ಲಿ ಕೋವಿಡ್ ಭಾರತೀಯ ಪ್ರಬೇಧ ಪತ್ತೆ

              ಜಿನೀವಾ,: ಭಾರತಕ್ಕೆ ಕೋವಿಡ್-19 ಎರಡನೇ ಅಲೆ ಅಪ್ಪಳಿಸಲು ಕಾರಣವಾದ ಭಾರತೀಯ ಪ್ರಬೇಧದ ವೈರಸ್‌ಗಳು ವಿಶ್ವದ ಹಲವೆಡೆ 44ಕ್ಕೂ ಅಧಿಕ ದೇಶಗಳಲ್ಲಿ ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.


          ಭಾರತದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬಿ.1.617 ಪ್ರಬೇಧದ ವೈರಸ್‌ಗಳು ಎಲ್ಲ ಆರು ಡಬ್ಲ್ಯುಎಚ್‌ಓ ಪ್ರದೇಶಗಳ ವ್ಯಾಪ್ತಿಯಲ್ಲಿ 44 ದೇಶಗಳಲ್ಲಿ ಪತ್ತೆಯಾಗಿದೆ. ಹೆಚ್ಚುವರಿಯಾಗಿ ಇತರ ಐದು ದೇಶಗಳಲ್ಲೂ ಇದು ಪತ್ತೆಯಾಗಿರುವ ಬಗ್ಗೆ ವರದಿಗಳಿವೆ ಎಂದು ಹೇಳಿದೆ. ವಿವಿಧ ದೇಶಗಳಿಂದ ಅಪ್ಲೋಡ್ ಮಾಡಲಾದ 4,500ಕ್ಕೂ ಅಧಿಕ ಮಾದರಿಗಳಲ್ಲಿ ಇದು ಕಂಡುಬಂದಿದೆ ಎಂದು ವಿವರಿಸಿದೆ.

      ಭಾರತದಿಂದ ಹೊರಗೆ ಬ್ರಿಟನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಪ್ರಬೇಧ ಕಂಡುಬಂದಿದೆ. ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ಭಾರತೀಯ ಪ್ರಬೇಧವನ್ನು ಆತಂಕಕಾರಿ ಪ್ರಬೇಧ ಎಂದು ಘೋಷಿಸಿತ್ತು. ಈ ಮುನ್ನ ಬ್ರಿಟನ್, ಬ್ರೆಝಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ಇತರ ಮೂರು ಪ್ರಬೇಧಗಳ ಪಟ್ಟಿಗೆ ಇದನ್ನು ಸೇರಿಸಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries