ತಿರುವನಂತಪುರ: ಯುಡಿಎಫ್ ಕಾರ್ಯಕರ್ತರು ಸಶಕ್ತರಾಗಿ ಹೋರಾಟಕ್ಕೆ ಸಿದ್ಧರಾಗಿರಬೇಕು ಎಂದು ನಿಯುಕ್ತ ಪ್ರತಿಪಕ್ಷ ನಾಯಕ ವಿ.ಡಿ.ಸತೀಸನ್ ಹೇಳಿದ್ದಾರೆ. ಯಾವುದೇ ಸಮುದಾಯ, ಸಂಸ್ಥೆಗಳಿಗೆ ಬಲಿಯಾಗದೆ ನೆಹರೂ ಅವರ ಸಮಾಜವಾದವನ್ನು ಆಧರಿಸಿದ ಕಾಂಗ್ರೆಸ್ ಕೇರಳದಲ್ಲಿ ಮತ್ತೆ ಪುಟಿದೇಳಲಿದೆ. ಪಕ್ಷ ಬಿರುಗಾಳಿಯಂತೆ ಮತ್ತೆ ಶಕ್ತಿಯುತವಾಗುತ್ತದೆ ಎಂದು ವಿ.ಡಿ.ಸತೀಶನ್ ಫೇಸ್‍ಬುಕ್‍ನಲ್ಲಿ ಈ ಕುರಿತು ಪ್ರಕಟಣೆ ನೀಡಿದ್ದಾರೆ.
ನನ್ನ ರಾಜಕೀಯವು ಕೋಮುವಾದದ ವಿರುದ್ಧ ರಾಜಿಯಾಗದ ಹೋರಾಟವಾಗಿದೆ. ಸೈದ್ಧಾಂತಿಕ ಹೋರಾಟದ ಮೂಲಕ ಈ ಮಣ್ಣಿನಲ್ಲಿ ಕೋಮುವಾದದ ರಾಜಕೀಯವನ್ನು ಹೂತುಹಾಕುವುದು ಯುಡಿಎಫ್‍ನ ಮೊದಲ ಆದ್ಯತೆಯಾಗಿದೆ ಎಂದು ವಿ.ಡಿ.ಸತೀಶನ್ ಸ್ಪಷ್ಟಪಡಿಸಿರುವರು.
ಪೂರ್ಣ ಫೇಸ್ಬುಕ್ ಪೋಸ್ಟ್:
ಪಕ್ಷವು ನನಗೆ ವಹಿಸಿಕೊಟ್ಟಿರುವ ಈ ಧ್ಯೇಯವನ್ನು ನಾನು ಅತ್ಯಂತ ಜವಾಬ್ದಾರಿಯುತವಾಗಿ ತೆಗೆದುಕೊಳ್ಳುತ್ತೇನೆ. ನಾನು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದಂತೆ, ಇದು ಹೂವುಗಳ ಕಿರೀಟ ಎಂಬ ಭ್ರಮೆಯಿಂದ ಜವಾಬ್ದಾರಿ ವಹಿಸಿಲ್ಲ. ಇದಕ್ಕಾಗಿ ನನ್ನನ್ನು ಆಯ್ಕೆ ಮಾಡಿದ ಕಾಂಗ್ರೆಸ್ ಹೈಕಮಾಂಡ್ ಮತ್ತು ಕೇರಳದ ಹಿರಿಯ ಮುಖಂಡರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜನರಿಗೆ ಇಂದು ಬೇಕಾಗಿರುವುದು ಹೊಸ ಪೀಳಿಗೆಯನ್ನು ಮತ್ತು ಹೊಸ ರಾಜಕಾರಣವನ್ನು ತಿಳಿಸುವ ವಿರೋಧ ಚಳುವಳಿಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಕಾಲಕಾಲಕ್ಕೆ ಬದಲಾವಣೆ ಇರಬೇಕು.ಈ ಕಾರ್ಯವನ್ನು ಎಲ್ಲಾ ನಾಯಕರು ಜನರನ್ನು ಒಟ್ಟುಗೂಡಿಸುವ ಮೂಲಕ ತೀವ್ರವಾಗಿ ಕೈಗೊಳ್ಳಬೇಕಾಗಿದೆ. ತಾನು ಪಕ್ಷದ ನಿರ್ದೇಶನದಂತೆ ಶಾಸಕಾಂಗದ ಒಳಗೆ ಮತ್ತು ಹೊರಗೆ ರಚನಾತ್ಮಕ ಪ್ರತಿಪಕ್ಷ ಮುಖಂಡನಾಗಿ ಕಾರ್ಯನಿರ್ವಹಿಸುವೆ ಎಂದು ಭರವಸೆ ನೀಡುವೆ.
ಕೇರಳದ ಸಾಮಾನ್ಯ ಪ್ರಜ್ಞೆಯು ಸಂಘ ಪರಿವಾರದ ದ್ವೇಷ ರಾಜಕಾರಣಕ್ಕೆ ವಿರುದ್ಧವಾಗಿದೆ. ಸೈದ್ಧಾಂತಿಕ ಹೋರಾಟದ ಮೂಲಕ ಈ ಮಣ್ಣಿನಲ್ಲಿ ಕೋಮುವಾದದ ರಾಜಕೀಯವನ್ನು ಹೂತುಹಾಕುವುದು ಯುಡಿಎಫ್‍ನ ಮೊದಲ ಆದ್ಯತೆಯಾಗಿದೆ. ನಾನು ಯಾವಾಗಲೂ ಹೇಳುವಂತೆ, ನನ್ನ ರಾಜಕೀಯವು ಕೋಮುವಾದದ ವಿರುದ್ಧ ರಾಜಿಯಾಗದ ಹೋರಾಟವಾಗಿದೆ. ನಾವು ಅಲ್ಪಸಂಖ್ಯಾತ ಕೋಮುವಾದ ಮತ್ತು ಬಹುಸಂಖ್ಯಾತ ಕೋಮುವಾದದ ವಿರುದ್ಧ ಸಮಾನವಾಗಿ ಹೋರಾಡಬೇಕು. ನಾವು ಯಾವುದೇ ಸಮುದಾಯ ಸಂಸ್ಥೆಗೆ ನಿಷ್ಠರಾಗದೆ ನೆಹರೂವಿಯನ್ ಸಮಾಜವಾದವನ್ನು ಆಧರಿಸಿದ ಕಾಂಗ್ರೆಸ್ ವಿಚಾರಗಳನ್ನು ಆಧರಿಸಿ ಪುನರಾಗಮನಕ್ಕಾಗಿ ಕೆಲಸ ಮಾಡುತ್ತೇವೆ. ಪ್ರತಿಯೊಬ್ಬ ಯುಡಿಎಫ್ ಕಾರ್ಯಕರ್ತರು ಈ ಹೋರಾಟಕ್ಕೆ ಸಿದ್ಧರಾಗಬೇಕು. ನಾವು ಚಂಡಮಾರುತದಂತೆ ಹಿಂತಿರುಗುತ್ತೇವೆ ಎಂಬುದರಲ್ಲಿ ಸಂಶಯವಿಲ್ಲ !!
ಎಲ್ಲರ ಬೆಂಬಲ ಮತ್ತು ಆಶೀರ್ವಾದಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಎಂದು ಪೋಸ್ಟ್ ಕೊನೆಗೊಂಡಿದೆ.





