ಕಣ್ಣೂರು: ಕಣ್ಣೂರು ಜಿಲ್ಲಾಧಿಕಾರಿ ದೇಶಾದ್ಯಂತ ಕೊರೋನಾ ತಡೆಗಟ್ಟುವ ಚಟುವಟಿಕೆಗಳನ್ನು ನಡೆಸುತ್ತಿರುವ ಸೇವಾಭಾರತಿಯನ್ನು ಪರಿಹಾರ ಸಂಸ್ಥೆಯಾಗಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಟಿ.ವಿ. ಸುಭಾಷ್ ಅವರು ಶನಿವಾರ ಆದೇಶ ಹೊರಡಿಸಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಿರ್ಧಾರದಲ್ಲಿ ಪ್ರಕಟಣೆ ನೀಡಲಾಗಿದೆ.
ಕೊರೋನಾದ ಆರಂಭದಿಂದಲೂ ನಿಯಂತ್ರಣ ಕ್ರಮಗಳಲ್ಲಿ ಸೇವಾಭಾರತಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಸಹಾಯ ಮಾಡುತ್ತಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನೀಡಿದ ನೆರವಿನ ದೃಷ್ಟಿಯಿಂದ ಇದನ್ನು ಪರಿಹಾರ ಸಂಸ್ಥೆ ಎಂದು ಘೋಷಿಸುವ ನಿರ್ಧಾರ ಕೈಗೊಳ್ಳಲಾಯಿತು. ಇತ್ತೀಚೆಗೆ, ಸೇವಾಭಾರತಿಯನ್ನು ಸ್ವತಃ ಪರಿಹಾರ ಸಂಸ್ಥೆ ಎಂದು ಘೋಷಿಸಲು ಕೇಳಲಾಗಿತ್ತು.
ಸೇವಾ ಭಾರತಿಯ ಸ್ವಯಂಸೇವಕರಿಗೆ ಗುರುತಿನ ಚೀಟಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳು ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗÀಳು ಮತ್ತು ಆರೋಗ್ಯ ಇಲಾಖೆಯ ಸೂಚನೆಯಂತೆ ಸ್ವಯಂಸೇವಕರು ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿರುವರು.
ಸಿಪಿಎಂ ನೇತೃತ್ವದ ಐಆರ್‍ಪಿಸಿಯನ್ನು ಏಕೈಕ ಪರಿಹಾರ ಸಂಸ್ಥೆ ಎಂದು ಸರ್ಕಾರ ಘೋಷಿಸಿದ್ದು ಪ್ರತಿಭಟನೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಹೊರಬಿದ್ದಿದೆ.





