HEALTH TIPS

ವಾಹನ ಮಾಲೀಕತ್ವ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆ

           ನವದೆಹಲಿ: ವಾಹನದ ನೋಂದಣಿ ಪ್ರಮಾಣಪತ್ರದಲ್ಲಿ ವ್ಯಕ್ತಿಯೊಬ್ಬರ ನಾಮನಿರ್ದೇಶನ (ನಾಮಿನಿ) ಮಾಡಿ, ಹೆಸರು ಸೇರ್ಪಡೆಗೆ ವಾಹನ ಮಾಲೀಕಗೆ ಅವಕಾಶ ನೀಡುವುದು ಸೇರಿದಂತೆ ಕೇಂದ್ರ ಮೋಟಾರು ವಾಹನಗಳ ಕಾಯ್ದೆಯ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.

        ವಾಹನವೊಂದರ ಮಾಲೀಕ ಸಾವಿಗೀಡಾದ ಸಂದರ್ಭದಲ್ಲಿ ಆ ವಾಹನವನ್ನು ನಾಮನಿರ್ದೇಶಿತ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಮಾಡಬಹುದು ಇಲ್ಲವೇ ಆ ವ್ಯಕ್ತಿಗೆ ವಾಹನದ ಮಾಲೀಕತ್ವದ ವರ್ಗಾವಣೆಗೆ ನಿಯಮದಲ್ಲಿನ ಬದಲಾವಣೆ ಅವಕಾಶ ಕಲ್ಪಿಸಲಿದೆ.

ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಸೂಚನೆಯನ್ನು ಪ್ರಕಟಿಸಿದೆ.

         ವಾಹನ ನೋಂದಣಿ ಸಮಯದಲ್ಲಿ ನಾಮಿನಿಯ ಹೆಸರನ್ನು ಪ್ರಮಾಣಪತ್ರದಲ್ಲಿ ಸೇರಿಸಬಹುದು. ಇಲ್ಲವೇ ವಾಹನ ನೋಂದಣಿಯ ಬಳಿಕ ಆನ್‌ಲೈನ್‌ ಮೂಲಕವೂ ನಾಮಿನಿಯ ಹೆಸರನ್ನು ಪ್ರಮಾಣಪತ್ರದಲ್ಲಿ ಸೇರ್ಪಡೆ ಮಾಡಬಹುದಾಗಿದೆ.

       'ವಾಹನದ ಮಾಲೀಕ ಮೃತಪಟ್ಟ 30 ದಿನಗಳೊಳಗೆ ನಾಮಿನಿಯು, ಮಾಲೀಕನ ನಿಧನದ ಬಗ್ಗೆ ನೋಂದಣಿ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಆಗ, 3 ತಿಂಗಳ ಕಾಲ ಆತ ವಾಹನವನ್ನು ಬಳಸಬಹುದಾಗಿದೆ. ಬಳಿಕ, ಸಾಮಾನ್ಯ ಪ್ರಕ್ರಿಯೆ ಮೂಲಕ ವಾಹನದ ಮಾಲೀಕತ್ವದ ವರ್ಗಾವಣೆಗೆ ನಾಮಿನಿ ಅರ್ಜಿಸಲ್ಲಿಸಬಹುದು' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

       ವಿಚ್ಛೇದನೆ, ಆಸ್ತಿಯಲ್ಲಿ ಪಾಲಾದ ಸಂದರ್ಭದಲ್ಲಿಯೂ ನಾಮಿನಿಯ ಹೆಸರಿನಲ್ಲಿ ಬದಲಾವಣೆ ಮಾಡಲು ಅವಕಾಶ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries