ತಿರುವನಂತಪುರ: ತೀವ್ರ ಕೊರೋನಾ ಹರಡುವಿಕೆಯಿಂದಾಗಿ ಸಂಚಾರ ನಿರ್ಬಂಧಗಳಿದ್ದಲ್ಲಿ ಕೆ.ಎಸ್.ಆರ್.ಟಿ.ಸಿ ಆರೋಗ್ಯ ಕಾರ್ಯಕರ್ತರಿಗೆ ಸೇವೆಯನ್ನು ನಡೆಸಲಿದೆ. ಕೆ.ಎಸ್.ಆರ್.ಟಿ.ಸಿ.ಯ ಸಿಎಂಡಿ ಈ ಸೂಚನೆ ನೀಡಿದ್ದಾರೆ.
ರಾಜ್ಯದ ಯಾವುದೇ ಭಾಗದಲ್ಲಿರುವ ಯಾವುದೇ ಆರೋಗ್ಯ ಕಾರ್ಯಕರ್ತ ಅಥವಾ ರೋಗಿಗೆ ಸೇವೆ ಅಗತ್ಯವಿದ್ದರೆ ಕೆ.ಎಸ್.ಆರ್.ಟಿ.ಸಿ.ಯ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು ಎಂದು ಸಿಎಂಡಿ ಹೇಳಿದ್ದಾರೆ. ನಿಯಂತ್ರಣ ಕೊಠಡಿ ಸಂಖ್ಯೆ - 0471- 2463799, 9447071021, 8129562972 (ವಾಟ್ಸಾಪ್ ಸಂಖ್ಯೆ)
ತಿರುವನಂತಪುರಂ ಜಿಲ್ಲೆಯಲ್ಲಿ, ಆರೋಗ್ಯ ಕಾರ್ಯಕರ್ತರ ಪ್ರಯಾಣಕ್ಕಾಗಿ ಜನರಲ್ ಆಸ್ಪತ್ರೆ, ಥೈಕಾಡ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ನೆಡುಮಾಂಗಡ್, ಅಟ್ಟಿಂಗಲ್, ನಯ್ಯಾಟ್ಟಿಂಕರ ಮತ್ತು ಕಾಟ್ಟಕಡ ಘಟಕಗಳಿಂದ ಅಗತ್ಯ ಸೇವೆಗಳನ್ನು ಒದಗಿಸುವಂತೆ ಎಂಡಿ ಘಟಕ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವರು.
ಅಟ್ಟಿಂಗಲ್‍ನಿಂದ ಬಸ್‍ಗಳು ವೈದ್ಯಕೀಯ ಕಾಲೇಜು, ಜನರಲ್ ಆಸ್ಪತ್ರೆ ಮತ್ತು ಥೈಕಾಡ್ ಆಸ್ಪತ್ರೆಗೆ ಸಾಗಲಿದ್ದು, ನಯ್ಯಾಟ್ಟಿಂಗರ, ನೆಡುಮಾಂಗಾಡ್ ಮತ್ತು ಕಾಟ್ಟಕಡದಿಂದ ಬಸ್‍ಗಳು ಥೈಕಾಡ್ ಆಸ್ಪತ್ರೆ, ಜನರಲ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಮೂಲಕ ಸಂಚರಿಸಲಿದೆ. ಇಂತಹ ವ್ಯವಸ್ಥೆ ಇತರ ಜಿಲ್ಲೆಗೂ ಪರಿಗಣನೆಯಲ್ಲಿದೆ ಎಂದು ತಿಳಿಸಲಾಗಿದೆ.






