ತಿರುವನಂತಪುರ: ಕೊರೋನಾ ವಿಸ್ತರಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಿಸಿರುವ ಲಾಕ್ ಡೌನ್ ಸಮಾಂತರ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ನಿರ್ದೇಶನ ನೀಡಿದ್ದಾರೆ. ಎಲ್ಲಾ ಜಿಲ್ಲಾ ಪೋಲೀಸ್ ಮುಖ್ಯಸ್ಥರು ಮತ್ತು ಸ್ಟೇಷನ್ ಹೌಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಿಬರ್ಂಧಗಳು ಇಂದಿನಿಂದ ರಾಜ್ಯದಲ್ಲಿ ಜಾರಿಗೆ ಬಂದಿವೆ.
ಕಳೆದ ಶನಿವಾರ ಮತ್ತು ಭಾನುವಾರ ಇದ್ದಂತಹ ನಿರ್ಬಂzssÀಗಳು ಇಂದಿನಿಂದ ಮೇ.9ರ ವರೆಗೂ ಜಾರಿಗೆ ಬರಲಿವೆ. ವಿನಾಯಿತಿ ಪಡೆದ ಸಂಸ್ಥೆಗಳ ನೌಕರರು ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಬಹುದು. ಕೊರಿಯರ್ ಸೇವೆಯು ಮನೆ-ಮನೆ ವಿತರಣೆ ವರ್ಗಕ್ಕೆ ಸೇರಿರುವುದರಿಂದ ಅವುಗಳಿಗೆ ರಿಯಾಯಿತಿ ನೀಡಲಾಗಿದೆ. ಕೊರಿಯರ್ ಸೇವಾ ನಿರ್ವಾಹಕರಿಗೆ ನಗರದಲ್ಲಿ ಅಥವಾ ಸುತ್ತಮುತ್ತಲಿನ ಗೋದಾಮುಗಳಿಗೆ, ಮನೆಗಳಿಗೆ ತೆರಳಲು ಯಾವುದೇ ನಿರ್ಬಂಧಗಳಿಲ್ಲ. ಕೊರಿಯರ್ ವಿತರಣೆಯು ತಡೆರಹಿತವಾಗಿದೆ. ಆದರೆ ಸಾರ್ವಜನಿಕರಿಗೆ ನೇರವಾಗಿ ಅಂತಹ ಸಂಸ್ಥೆಗಳಿಗೆ ಹೋಗಿ ಸರಕುಗಳನ್ನು ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ. ಇ-ಕಾಮರ್ಸ್ ಸಂಬಂಧಿತ ಚಟುವಟಿಕೆಗಳಿಗೆ ರಿಯಾಯಿತಿಗಳು ಲಭ್ಯವಿದೆ.
ಸಂಪರ್ಕತಡೆಯಲ್ಲಿರುವವರು ಹೊರಹೋಗದಂತೆ ನೋಡಿಕೊಳ್ಳಲು ಮಹಿಳಾ ಪೋಲೀಸ್ ಅಧಿಕಾರಿಯನ್ನು ಪಂಚಾಯತಿಗಳ ಪ್ರತಿ ವಾರ್ಡ್‍ನಲ್ಲಿ ನೇಮಕಾತಿ ಮಾಡಲಾಗುತ್ತದೆ. ಮಹಿಳಾ ಪೋಲೀಸ್ ಠಾಣೆ, ಮಹಿಳಾ ಸೆಲ್ ಮತ್ತು ಮಹಿಳಾ ಸ್ವರಕ್ಷಣಾ ತಂಡದ ಮಹಿಳಾ ಪೋಲೀಸ್ ಅಧಿಕಾರಿಗಳನ್ನು ಈ ಉದ್ದೇಶಕ್ಕಾಗಿ ನಿಯೋಜಿಸಲಾಗುವುದು. ರಾಜ್ಯ ಪೋಲೀಸ್ ಮಾಧ್ಯಮ ಕೇಂದ್ರದ ಉಪನಿರ್ದೇಶಕರು ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲಿದ್ದಾರೆ. ಇಂತಹ ಚಟುವಟಿಕೆಗಳಿಗೆ ರಾಜ್ಯ ಮಹಿಳಾ ಸೆಲ್ ನಿಂದ ಮಹಿಳಾ ಪೋಲೀಸರನ್ನು ನಿಯೋಜಿಸುವಂತೆ ತಿರುವನಂತಪುರ ನಗರ ಪೆÇಲೀಸ್ ಆಯುಕ್ತ ಮತ್ತು ತಿರುವನಂತಪುರ ಗ್ರಾಮೀಣ ಪೋಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಇದಕ್ಕಾಗಿ ಮಹಿಳಾ ಸೆಲ್ ಎಸ್.ಪಿ ಗರಿಷ್ಠ ಸಂಖ್ಯೆಯ ಮಹಿಳಾ ಪೋಲೀಸ್ ಅಧಿಕಾರಿಗಳ ಹುಡುಕಾಟದಲ್ಲಿದೆ. ಈ ಕೆಲಸಗಳಿಗೆ ಸಾಧ್ಯವಾದಷ್ಟು ಮಹಿಳಾ ಪೋಲೀಸ್ ಅಧಿಕಾರಿಗಳನ್ನು ತಮ್ಮ ಪ್ರದೇಶದಲ್ಲಿ ನಿಯೋಜಿಸಲಾಗುವುದು.
ಸ್ಟೇಷನ್ ಹೌಸ್ ಅಧಿಕಾರಿಗಳು ಆಮ್ಲಜನಕವನ್ನು ಸಾಗಿಸುವ ವಾಹನಗಳನ್ನು ಸಾಗಿಸಲು ಅನುಕೂಲ ಮಾಡಿಕೊಡಲಿದ್ದಾರೆ. ಆಮ್ಲಜನಕ ಮತ್ತು ಔಷಧಿಗಳ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಜಿಲ್ಲಾ ಪೋಲೀಸ್ ಮುಖ್ಯಸ್ಥರು ಪ್ರತಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಿದ್ದಾರೆ. ಆಮ್ಲಜನಕವನ್ನು ಸಾಗಿಸುವ ಗ್ರೀನ್ ಕಾರಿಡಾರ್ ವ್ಯವಸ್ಥೆಗೆ ಎಡಿಜಿಪಿಯನ್ನು ನೋಡಲ್ ಅಧಿಕಾರಿಯಾಗಿ ಕಾನೂನು ಸುವ್ಯವಸ್ಥೆ ಇಲಾಖೆ ನೇಮಿಸಿದೆ.
ವಿವಿಧ ಭಾಷಾ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆUಳು ಉಂಟಾಗದಿರಲು ಸ್ಟೇಷನ್ ಹೌಸ್ ಅಧಿಕಾರಿಗಳು ವಿಶೇಷ ಗಮನ ಹರಿಸುತ್ತಾರೆ. ಅಂತಹ ಶಿಬಿರಗಳಿಗೆ ಪ್ರತಿದಿನ ಭೇಟಿ ನೀಡುವಂತೆ ಸ್ಟೇಷನ್ ಹೌಸ್ ಅಧಿಕಾರಿಗಳು ಮತ್ತು ಡಿವೈಎಸ್ಪಿಗಳಿಗೆ ನಿರ್ದೇಶಿಸಲಾಗಿದೆ.





