ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿಯ ಏತಡ್ಕ ಸಮೀಪದ ಪುತ್ರಕಳ ನಿವಾಸಿ ನಾಗರಾಜ.ಪಿ (35) ಕೂಲಿ ಕೆಲಸ ಮಾಡಿ ತನ್ನ ಗಳಿಕೆಯಿಂದ ತಂದೆ-ತಾಯಿಯನ್ನು ಒಳಗೊಂಡ ಸಂಸಾರದ ಆಧಾರ ಸ್ತಂಭವಾಗಿದ್ದರು.
ಕಳೆದ ಮಾರ್ಚ್ ತಿಂಗಳಲ್ಲಿ ಇವರಿಗೆ ಆರೋಗ್ಯ ಸಮಸ್ಯೆ ತಲೆದೋರಿದಾಗ ಕಾಸರಗೋಡು ಆಸ್ಪತ್ರೆಯಲ್ಲಿ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸಿ ನಾಗರಾಜ ಅವರ ಎರಡೂ ಕಿಡ್ನಿಗಳು ವೈಫಲ್ಯ ಹೊಂದಿರುವ ಬಗ್ಗೆ ಖಚಿತಪಡಿಸಿದ್ದಾರೆ. ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ತಮ್ಮ ಚಿಕಿತ್ಸೆಗಾಗಿ ಈಗಾಗಲೇ ಸುಮಾರು ಲಕ್ಷಗಳಷ್ಟು ರೂಪಾಯಿ ವೆಚ್ಚ ಮಾಡಿರುತ್ತಾರೆ.ಈಗ ವಾರಕ್ಕೆ ಮೂರು ಡಯಾಲಿಸಿಸ್ ಮಾಡುತಿದ್ದಾರೆ. ಇವರು ದಾನಿಗಳ ನೆರವಿನಿಂದ ಕಿಡ್ನಿ ಕಸಿ ಚಿಕಿತ್ಸೆ ಪಡೆಯಲು ಆಗ್ರಹ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಸಹೃದಯರು ನೆರವು ನೀಡಬೇಕೆಂದು ಶ್ರೀದುರ್ಗಾ ಭಕ್ತವೃಂದ ವಾಟ್ಸ್ ಆಫ್ ಗುಂಪು ಮನವಿ ಮಾಡಿದೆ.
ದಾನಿಗಳು ತಮ್ಮ ನೆರವಿನ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಹಿಸಿ ಸಹಕರಿಸಬಹುದಾಗಿದ್ದು, ಬ್ಯಾಂಕ್ ಖಾತೆ ವಿವರ:
ನಾಗರಾಜ ಪಿ., ಕೇರಳ ಗ್ರಾಮೀಣ ಬ್ಯಾಂಕ್, ಜಯನಗರ ಶಾಖೆ, ಖಾತೆ ಸಂಖ್ಯೆ: 40413100011287, ಐ.ಎಫ್.ಎಸ್.ಸಿ.ಸಂಖ್ಯೆ: ಕೆ.ಎಲ್.ಜಿ.ಬಿ.00040413, ಮೊಬೈಲ್ ಸಂಖ್ಯೆ: 9496477402.


