ತಿರುವನಂತಪುರ: ಚುನಾವಣಾ ಹಿನ್ನಡೆಯ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ, ಅತೃಪ್ತಿಗಳು ಬುಗಿಲೆದ್ದಿದೆ. ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಿರುವುದು ಪಕ್ಷದೊಳಗೆ ಕಳವಳಕ್ಕೆ ಕಾರಣವಾಗುತ್ತಿದೆ. ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಜೀನಾಮೆ ನೀಡಿದ್ದಾರೆ.
ಶಾಂತಕುಮಾರಿ, ಸಿ ಅಜಿತಾ ಮತ್ತು ಡಾಲಿ ಕೆ ಜಾರ್ಜ್ ಅವರು ಮಹಿಳಾ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು. ಪಕ್ಷ ತೊರೆದ ಲತಿಕಾ ಸುಭಾಷ್‍ಗೆ ಬೆಂಬಲ ಘೋಷಿಸಿ ಮೂವರೂ ಎನ್‍ಸಿಪಿಗೆ ಸೇರುವ ನಿರೀಕ್ಷೆಯಿದೆ.
ಸ್ಥಾನ ನೀಡದಿದ್ದನ್ನು ವಿರೋಧಿಸಿ ಲತಿಕಾ ಸುಭಾಷ್ ರಾಜೀನಾಮೆ ನೀಡಿದ ನಂತರ ಹೆಚ್ಚಿನ ಕಾರ್ಯಕರ್ತರು ಪಕ್ಷವನ್ನು ತೊರೆಯುತ್ತಾರೆ ಎಂಬ ವದಂತಿಗಳಿವೆ. ಪ್ರಧಾನ ಕಾರ್ಯದರ್ಶಿಗಳ ರಾಜೀನಾಮೆ ಈ ವದಂತಿಗಳನ್ನು ಖಚಿತಪಡಿಸುತ್ತದೆ. ವರದಿಗಳ ಪ್ರಕಾರ, ಅವರು ಲತಿಕಾ ಸುಭಾಷ್ ಅವರಿಗೆ ಬೆಂಬಲ ನೀಡಲಿದ್ದಾರೆ. ಲಾಕ್ ಡೌನ್ ಮುಗಿದ ಬಳಿಕ ಹೆಚ್ಚಿನ ಕಾರ್ಯಕರ್ತರು ಮಹಿಳಾ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ವರದಿಗಳಿವೆ.
ವಿಧಾನಸಭಾ ಚುನಾವಣೆಯಲ್ಲಿ ನಿರ್ಲಕ್ಷ್ಯವನ್ನು ವಿರೋಧಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಿಕಾ ಸುಭಾಷ್ ಅವರು ಈಗಾಗಲೇ ಪಕ್ಷವನ್ನು ತೊರೆದಿದ್ದಾರೆ.


