ತಿರುವನಂತಪುರ:ಇತಿಹಾಸ ಪ್ರಸಿದ್ದ ಅನಂತಶಯನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಆನೆ ಶನಿವಾರ ಕೊನೆಯುಸಿರೆಳೆಯಿತು. ದರ್ಶಿನಿ ಎಂಬ ಆನೆ ಮೃತಪಟ್ಟಿದೆ. ಆರೋಗ್ಯ ಸಮಸ್ಯೆಗಳಿಂದಾಗಿ ಅದು ಕೆಲವು ತಿಂಗಳು ಚಿಕಿತ್ಸೆಯಲ್ಲಿತ್ತು. ದರ್ಶಿನಿಗೆ 60 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿತ್ತೆಂದು ತಿಳಿದುಬಂದಿದೆ.
ಗರ್ಭಾಶಯದ ಸಮಸ್ಯೆಗಳಿಗೆ ಆನೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಮಧ್ಯೆ, ಹೃದಯಾಘಾತ ಮತ್ತು ಸೋಂಕು ಉಂಟಾಯಿತು. ಪರಿಣಾಮವಾಗಿ ಆನೆಯ ಆರೋಗ್ಯ ಹದಗೆಟ್ಟಿತು.
ಕಳೆದ ಕೆಲವು ದಿನಗಳಲ್ಲಿ ಆನೆಗೆ ತಿನ್ನಲು ತೊಂದರೆಯಾಗಿತ್ತು. ಇದು ಕ್ಷೀಣಿಸುತ್ತಿರುವ ಆರೋಗ್ಯಕ್ಕೆ ಕಾರಣವಾಗಿದೆ ಎಂದು ಭಾವಿಸಲಾಗಿದೆ. ದರ್ಶಿನಿ ಪದ್ಮನಾಭ ಸ್ವಾಮಿ ಕ್ಷೇತ್ರಕ್ಕೆ 4 ದಶಕಗಳ ಹಿಂದೆ ತರಲಾಗಿತ್ತು.


