ಬದಿಯಡ್ಕ: ಇಲ್ಲಿನ ಪೇಟೆ ಶುಚೀಕರಣ ಯಜ್ಞದಲ್ಲಿ ಅಭಯ ಸೇವಾಭಾರತಿ ಬದಿಯಡ್ಕ ಇದರ ಸ್ವಯಂಸೇವಕರು ಪಾಲ್ಗೊಂಡರು. ಬದಿಯಡ್ಕ ಗ್ರಾಮಪಂಚಾಯಿತಿ ಕಚೇರಿಯ ಪರಿಸರ, ಗಣೇಶ ಮಂದಿರ, ಕುಟುಂಬಶ್ರೀ ಜನಕೀಯ ಹೋಟೆಲ್ ಮುಂಭಾಗ ಹಾಗೂ ರಸ್ತೆಯ ಇಕ್ಕೆಲಗಳಲ್ಲೂ ಶುಚೀಕರಣ ನಡೆಸಲಾಯಿತು.
ಕಳೆದ ದಿನಗಳಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿ ನೇತೃತ್ವದಲ್ಲಿ ಮಳೆಗಾಲ ಪೂರ್ವಭಾವೀ ಶುಚೀಕರಣಕ್ಕೆ ಆಡಳಿತ ಸಮಿತಿ ನೇತೃತ್ವದಲ್ಲಿ ಚಾಲನೆ ನೀಡಲಾಗಿತ್ತು. ರಸ್ತೆ ಬದಿಗಳಲ್ಲಿರುವ ಒಳಚರಂಡಿಗಳನ್ನು ಜೆಸಿಬಿ ಬಳಸಿ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಶುಚೀಕರಣದಲ್ಲಿ ಪಾಲ್ಗೊಂಡಿದ್ದರು.


