ಬದಿಯಡ್ಕ: ಕೊರೊನಾ ಸಂದಿಗ್ದಾವಸ್ಥೆಯಲ್ಲಿ ಸಹಾಯ ಹಸ್ತವಾಗಿ ಪೆರಡಾಲ ನವಜೀವನ ಶಾಲಾ ವತಿಯಿಂದ ಒಂದು ಕ್ವಿಂಟಾಲ್ ಅಕ್ಕಿಯನ್ನು ಬದಿಯಡ್ಕ ಪಂಚಾಯತಿ ಜನಕೀಯ ಹೋಟೆಲ್ ಸಮುದಾಯ ಅಡುಗೆ ಮನೆಗೆ ಕೊಡುಗೆಯಾಗಿ ನೀಡಲಾಯಿತು.
ಶಾಲಾ ಪ್ರಮುಖರು ಬದಿಯಡ್ಕ ಗ್ರಾ.ಪಂ.ಅಧ್ಯಕ್ಷೆ ಶಾಂತಾ ಬಾರಡ್ಕ ಅವರಿಗೆ ಹಸ್ತಾಂತರಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಎಂ.ಅಬ್ಬಾಸ್, ಕಾರ್ಯದರ್ಶಿ ಪ್ರದೀಪ್, ಅಧ್ಯಾಪಕರಾದ ನಿರಂಜನ ರೈ ಪೆರಡಾಲ, ರಾಜೇಶ್ ಮಾಸ್ತರ್ ಅಗಲ್ಪಾಡಿ, ಸಿಬ್ಬಂದಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.


