ಪೆರ್ಲ: ಎಣ್ಮಕಜೆ ಆಯುಷ್ ಪ್ರೈಮರಿ ಹೆಲ್ತ್ ಸೆಂಟರಿನಲ್ಲಿ (ಹೋಮಿಯೋಪತಿ) ಕೋವಿಡ್ ಅನಂತರದ ಹೋಮಿಯೋ ಚಿಕಿತ್ಸೆಗೆ ಚಾಲನೆ ನೀಡಲಾಯಿತು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.
ಉಪಾಧ್ಯಕ್ಷೆ ಡಾ.ಫಾತಿಮತ್ ಹಂಸಾರ್,ಆರೋಗ್ಯ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ. ಕುಲಾಲ್ , ಪಂ.ಸದಸ್ಯರಾದ ರಮ್ಲ ಇಬ್ರಾಹಿಂ, ಮಹೇಶ್ ಭಟ್, ರಾಮಚಂದ್ರ ಎಂ.ಮೊದಲಾದವರು ಉಪಸ್ಥಿತರಿದ್ದರು. ಮೆಡಿಕಲ್ ಆಫಿಸರ್ ಡಾ.ಅನಘ ಎಂ. ಅವರು ಪಂಚಾಯತಿನ ವಾರ್ಡ್ ಮಟ್ಟದ ವಿತರಣೆಗಾಗಿ ಕೋವಿಡ್ ಪ್ರತಿರೋಧ ಇಮ್ಯೂನ್ ಬೂಸ್ಟರ್ ಔಷಧಿಗಳನ್ನು ಹಸ್ತಾಂತರಿಸಿದರು. ಕೋವಿಡ್ ಬಾಧಿತರಾದ ಬಳಿಕ ಕಂಡು ಬರುವ ಎಲ್ಲಾ ಅನಾರೋಗ್ಯ ಸಮಸ್ಯೆಗಳಿಗೂ ಹೋಮಿಯೋ ಚಿಕಿತ್ಸೆ ಮಂಗಳ,ಗುರುವಾರ ಎಂಬೀ ದಿನಗಳಲ್ಲಿ ಬೆಳಿಗ್ಗೆ 12 ಗಂಟೆಯಿಂದ ಮಧ್ಯಾಹ್ನ 2ರ ತನಕ ಡಿಸ್ಪೇಶನರಿಯಲ್ಲಿ ಔಷಧಿ ವಿತರಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿದ್ದಾರೆ.



