ಕೊಚ್ಚಿ: ಕೋಝಿಕೋಡ್ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಘಟಿಸಿದ್ದ ವಿಮಾನ ಅಪಘಾತ ಸಂಬಂಧ ಪರಿಹಾರವನ್ನು ಆದಷ್ಟು ಬೇಗ ಪಾವತಿಸಬೇಕೆಂದು ಕೇರಳ ಹೈಕೋರ್ಟ್ ನಿರ್ದೇಶಿಸಿದೆ. ಅಪಘಾತದ ನಂತರ ಗಂಭೀರವಾಗಿ ಗಾಯಗೊಂಡ ಮತ್ತು ಸಂಬಂಧಿಕರನ್ನು ಕಳೆದುಕೊಂಡವರಿಗೆ ನೆರವು ನೀಡಲು ವಿಳಂಬವಾಗಿದೆ ಎಂದು ಹೈಕೋರ್ಟ್ ಟೀಕಿಸಿತು. ಪಾಲಕ್ಕಾಡ್ ಮೂಲದ ಮೊಹಮ್ಮದ್ ಮುಸ್ತಫಾ ಸೇರಿದಂತೆ ಎಂಟು ಮಂದಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಎನ್ ನಗರೇಶ್ ಅವರು ಈ ಆದೇಶವನ್ನು ಅಂಗೀಕರಿಸಿದ್ದಾರೆ.
ಪರಿಹಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತನಿಖೆಯ ಅಂತಿಮ ಹಂತದಲ್ಲಿವೆ ಮತ್ತು ಈ ಹಂತದಲ್ಲಿ ಅರ್ಜಿಯು ಅನಗತ್ಯ ಮತ್ತು ಅಪಕ್ವವಾಗಿದೆ ಎಂದು ಏರ್ ಇಂಡಿಯಾ ವಕೀಲರು ವಾದಿಸಿದರು. ಸಾಕಷ್ಟು ಪರಿಹಾರದ ಬೇಡಿಕೆ ಅಸಮರ್ಪಕ ಎಂದು ನ್ಯಾಯಾಲಯ ಒಪ್ಪಿಕೊಂಡರೂ ಒಂಬತ್ತು ತಿಂಗಳವರೆಗೆ ಪರಿಹಾರವನ್ನು ನೀಡದಿರುವ ಕ್ರಮವನ್ನು ಟೀಕಿಸಿದೆ. 2020ರ ಆಗಸ್ಟ್ 7 ರಂದು ವಿಮಾನವು ರನ್ವೇಯಿಂದ 37 ಅಡಿ ದೂರದಲ್ಲಿ ಪತನಗೊಂಡು ಅಪ್ಪಳಿಸಿತು. ಅಪಘಾತದಲ್ಲಿ 21 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು.





