ಕಾಸರಗೋಡು: ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕೋವಿಡ್ ಪಾಸಿಟಿವ್ ಆಗಿರುವವರ ಪ್ರಾಥಮಿಕ ಸಂಪರ್ಕ ಹೊಂದಿರುವ ಮಂದಿ ಕಡ್ಡಾಯವಾಗಿ 7 ದಿನಗಳ ಕ್ವಾರೆಂಟೈನ್ ಪಾಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕಡಿಮೆ ಅವಧಿಯಲ್ಲಿ ಅತ್ಯಧಿಕ ಮoದಿಗೆ ಹರಡಬಲ್ಲ ಸಾಮಥ್ರ್ಯವನ್ನು ಕೋವಿಡ್ನ ನೂತನ ಪ್ರಬೇಧ ಹೊಂದಿದೆ. ಮನೆಯಲ್ಲಿ ಒಬ್ಬರಿಗೆ ಕೋವಿಡ್ ಪಾಸಿಟಿವ್ ಆಗಿದ್ದರೆ ಅವರ ಪ್ರಾಥಮಿಕ ಸಂಪರ್ಕ ಹೊಮದಿರುವ ಮನೆಯ ಎಲ್ಲ ಸದಸ್ಯರಿಗೆ ಪಶಾಸಿಟಿವ್ ಆಗುವ ಸಾಧ್ಯತೆಯನ್ನು ಇದು ಹೊಂದಿದೆ. ಆದಕಾರಣ ಮನೆಯ ಪ್ರತಿ ಸದಸ್ಯರೂ ಕ್ವಾರೆಂಟೈನ್ ಪಾಲಿಸಬೇಕಾದ ಅಗತ್ಯವಿದೆ. ತಪಾಸಣೆಯ ಫಲಿತಾಂಶ ನೆಗೆಟಿವ್ ಆಗಿದ್ದರೂ, ಹೆಚ್ಚುವರಿ 7 ದಿನ(ಒಟ್ಟು 14 ದಿನ) ಕಡ್ಡಾಯ ಕ್ವಾರೆಂಟೈನ್ ಪಾಲಿಸಬೇಕು.
ವಾಕ್ಸಿನೇಷನ್ ಪೂರ್ಣಗೊಳಿಸಿದವರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈಗಳನ್ನು ಆಗಾಗ ಶುಚಿಗೊಳಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಮಾಜದ ಪ್ರತಿಯೊಬ್ಬರೂ ವಾಕ್ಸಿನೇಷನ್ ಪಡೆದು ಪೂರ್ಣವಾಗುವವರೆಗೆ ಪ್ರತಿರೋಧದ ಪ್ರಾಥಮಿಕ ಹಂತಗಳನ್ನು ಎಲ್ಲರೂ ಪಾಲಿಸಿ, ಆರೋಗ್ಯ ಇಲಾಖೆ ತಿಳಿಸುವ ಎಲ್ಲ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ತಿಳಿಸಿದರು.
ಪಾಸಿಟಿವ್ ಆಗಿರುವವರ ಮನೆಮಂದಿ ಅಗತ್ಯದ ಸಾಮಾಗ್ರಗಿಳಿಗಾಗಿ ವಾರ್ಡ್ ಮಟ್ಟದ ಜಾಗೃತಾ ಸಮಿತಿ ಯಾ ಆರ್.ಆರ್.ಟಿ. ಯನ್ನು ಆಶ್ರಯಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಚಟುವಟಿಕೆಗಳು ನಡೆದುಬರುತ್ತಿವೆ ಎಂದವರು ತಿಳಿಸಿರುವರು.





