ಬೆದ್ರಂಪಳ್ಳ ನವಜೀವನ ಎಂಡೋ ವಿಶೇಷ ಶಾಲಾ ಕಟ್ಟಡದಲ್ಲಿ ಎಣ್ಮಕಜೆ ಪಂಚಾಯತಿನ ಡೋಮಿಸಿಲೆರಿ ಕೇರ್ ಸೆಂಟರ್ ಕಾರ್ಯಾರಂಭ
ಪೆರ್ಲ: ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ದ್ವಿತೀಯ ಅಲೆಯನ್ನು ತಡೆಗಟ್ಟಿ ಪ್ರತಿರೋಧ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲು ಎಣ್ಮಕಜೆ ಗ್ರಾಮ ಪಂಚಾಯತಿ ಆರಂಭಿಸುವ ಡೋಮಿಸಿಲೆರಿ ಕೇರ್ ಸೆಂಟರ್ ಬೆದ್ರಂಪಳ್ಳದಲ್ಲಿ ಕಾರ್ಯರಂಭಗೊಂಡಿದೆ.
ಇಲ್ಲಿನ ಬೆದ್ರಂಪಳ್ಳ ಪೆರ್ಲ ರಸ್ತೆಯ ಸಮೀಪ ಇರುವ ನವಜೀವನ ಎಂಡೋಸಲ್ಪಾನ್ ಸ್ಪೇಶಲ್ ಸ್ಕೂಲಿನ ನೂತನ ಕಟ್ಟಡವನ್ನು ಡೋಮಿಸಿಲೆರಿ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಆಡಳಿತ ಸಮಿತಿಯು ಸಮ್ಮತಿಸಿತ್ತು. ಇದರಂತೆ ಎಣ್ಮಕಜೆ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅವರಿಗೆ ಶಾಲಾ ಪ್ರಬಂಧಕ ಜೋಸ್ ಚೆಂಬೊಟ್ಟಿಕಲ್ ಕೀಲಿ ಕೈ ಹಸ್ತಾಂತರಿಸಿದರು. ಪಂ.ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ, ಶಾಲಾ ಸಹ ಪ್ರಬಂಧಕ ಬಿನಿಫ್ ಪುದುಚ್ಚೇರಿ, ಪೆರ್ಲ ಪಿ.ಎಚ್.ಸಿ.ಆರೋಗ್ಯಧಿಕಾರಿ ಸಜಿತ್,ಜ್ಯೂ. ಹೆಲ್ತ್ ಇನ್ಸ್ ಪೇಕ್ಟರ್ ಗಳು, ಕೋವಿಡ್ ಹೆಲ್ಪ್ ಡೆಸ್ಕ್ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡೊಮಿಸಿಲೆರಿ ಕೇರ್ ಕೇಂದ್ರದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಇದೀಗ ಪ್ರಾಥಮಿಕ ಸೌಲಭ್ಯಗಳೊಂದಿಗೆ ಕೋವಿಡ್ ಪ್ರತಿರೋಧ ಚಿಕಿತ್ಸೆಯನ್ನು ಆರಂಭಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


