ಪೆರ್ಲ: ರಮ್ಜಾನ್ ಹಬ್ಬ ಆಚರಣೆಯಂದು ಕೋರೋನ ಪ್ರತಿರೋಧ ಚಟುವಟಿಕೆಗಾಗಿ ಧನ ಸಹಾಯ ನೀಡುವ ಮೂಲಕ ಪೆರ್ಲ ಸಮೀಪದ ಮತ್ರ್ಯ ಜುಮಾ ಮಸೀದಿ ಜಮಾಯತ್ ಸಮಿತಿ ಮಾದರಿಯಾಗಿದೆ. ಎಣ್ಮಕಜೆ ಗ್ರಾಮ ಪಂಚಾಯತಿ ಕೋವಿಡ್ ಗಾಗಿ ಸ್ಥಾಪಿಸುವ ಡೊಮಿಸಿಲರಿ ಕೇರ್ ಕೇಂದ್ರಕ್ಕೆ ರೋಗಿಗಳಿಗಾಗಿ ಪ್ರಾಥಮಿಕ ಸೌಲಭ್ಯ ಏರ್ಪಡಿಸಲು ಜಮಾಯತ್ ಸಮಿತಿ ಸಂಗ್ರಹಿಸಿದ 30 ಸಾವಿರ ರೂ ಧನವನ್ನು ವಿತರಿಸಿದೆ. ಜಮಾಯತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಬಿ. ಅವರು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರಿಗೆ ಧನ ಸಹಾಯವನ್ನು ಹಸ್ತಾಂತರಿಸಿದರು.
ಜಮಾಯತ್ ಸಮಿತಿ ಪದಾಧಿಕಾರಿಗಳಾದ ಶೇರಿಫ್ ಎ.ಕೆ,ನವಾಸ್ ಮತ್ರ್ಯ,ಪಂಚಾಯತ್ ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್,ಹೆಡ್ ಕ್ಲಾರ್ಕ್ ಬೇಬಿ ಮೋನ್,ಹಂಸಾರ್ ಎ.ಕೆ,ಆಶ್ರಫ್ ಮತ್ರ್ಯ ಮೊದಲಾದವರು ಉಪಸ್ಥಿತರಿದ್ದರು.


